ಮಾನ್ವಿಯ ಮಾನವಿ ಪತ್ತಿನ ಸೌಹಾರ್ದ ಸಹಕಾರ ಸಂಘದ ಕಚೇರಿಯಲ್ಲಿ ಶುಕ್ರವಾರ ಡಾ.ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಜಿಲ್ಲೆ

ಡಾ.ಶಿವಕುಮಾರ ಸ್ವಾಮೀಜಿ ವಿದ್ಯಾರ್ಥಿಗಳ ಪಾಲಿನ ಬೆಳಕು

Raichur

ಮಾನ್ವಿ: ವಿದ್ಯೆ, ವಸತಿ ಮತ್ತು ಅನ್ನ ದಾಸೋಹ ನೀಡಿ ಜೀವನದಲ್ಲಿ ದಾರಿ ತೋರಿಸಿದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದರು ಎಂದು ಮಾನವಿ ಪತ್ತಿನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಚ್.ಮೌನೇಶ ಹೇಳಿದರು.

ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿ ಮತ ಪಂಥಗಳನ್ನು ನೋಡದೆ ಎಲ್ಲರಿಗೂ ಸಮಾನವಾಗಿ ಕಂಡ ಮಹನೀಯರಾಗಿದ್ದರು ಎಂದರು. ಉಪಾಧ್ಯಕ್ಷ ಅಂಬರೀಶ್, ಎಎಸ್‌ಐ ವೀರನಗೌಡ ಕರಡಿಗುಡ್ಡ, ಮುಖಂಡರಾದ ಸಿದ್ದಪ್ಪಗೌಡ ಆಲ್ದಾಳ್, ಚಂದ್ರಶೇಖರ ಜಾನೇಕಲ್, ಗುಂಡಪ್ಪಗೌಡ ಕಲ್ಲೂರು, ಬಸವರಾಜ ನೀರಮಾನ್ವಿ, ಮಹೇಂದ್ರ ಸಜ್ಜನ್, ಪೋಕರಾಜ್, ಶಿವಕುಮಾರ, ರವಿ ಚಿಮ್ಲಾಪುರ, ಉಷಾ, ಸುರೇಶ, ರಮೇಶ, ರಾಧಮ್ಮ ಇತರರು ಇದ್ದರು.