ಮಾನ್ವಿ: ಕರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಆದೇಶದಂತೆ ಪಟ್ಟಣದಲ್ಲಿ ಬುಧವಾರ ನಡೆಯಬೇಕಿದ್ದ ತರಕಾರಿ ಸಂತೆಯನ್ನು ತಹಸೀಲ್ದಾರ್ ಅಮರೇಶ ಬಿರಾದಾರ್, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷಿರದ್ದುಗೊಳಿಸಿದರು.
ಕರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರು, ವ್ಯಾಪಾರಸ್ಥರು ಸಹಕರಿಸಬೇಕು, ಕರೊನಾ ವೈರಸ್ ಕುರಿತು ಭಯ ಬೇಡ ಜಾಗೃತಿಯಿಂದ ಇರಬೇಕು, ಸ್ವಚ್ಛತೆ ಕಾಪಾಡಬೇಕು ಎಂದರು.
ತರಕಾರಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಜನದಟ್ಟಣೆ ಉಂಟಾಗುವ ಸಂಭವಿರುವುದರಿಂದ ಮುಂಜಾಗ್ರತೆಯಿಂದಾಗಿ ಸಂತೆ ಬಂದ್ ಮಾಡಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.