ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದರೂ ಉದ್ಧಟತನ
ಮಾನ್ವಿ: ಕರೊನಾ ತಡೆಗಟ್ಟುವ ನಿಟ್ಟಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿದ್ದರೂ ಅನಗತ್ಯವಾಗಿ ರಸ್ತೆಯಲ್ಲಿ ಸುತ್ತಾಡುತ್ತಿದ್ದ ಯುವಕರು, ಸಾರ್ವಜನಿಕರಿಗೆ ಲಾಠಿ ರುಚಿ ತೋರಿಸಿದ ಪಿಎಸ್‌ಐ ರಂಗಪ್ಪ ದೊಡ್ಡಮನಿ ಬೈಕ್‌ಗಳನ್ನು ವಶಕ್ಕೆ ಪಡೆದರು.
ಜಪ್ತಿಯಾದ 30ಕ್ಕೂ ಹೆಚ್ಚು ವಾಹಗಳನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಸಾರ್ವಜನಿಕರು ಆಗತ್ಯ ವಸ್ತುಗಳ ಅವಶ್ಯಕತೆ ಇದ್ದಾಗ ಮಾತ್ರ ಹೊರಗಡೆ ಬಂದು ಕಿರಾಣಿ, ತರಕಾರಿ, ಹಣ್ಣು ಪಡೆಯಲು ಮಧ್ಯಾಹ್ನ 12 ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೂ ಮನೆಯಿಂದ ಹೊರಬಂದು ಸುತ್ತಾಡುತ್ತಾ ಲಾಕ್‌ಡೌನ್ ಉಲ್ಲಂಘಿಸುತ್ತಿರುವುದ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸುಮ್ಮನೆ ತಿರುಗಾಡುವವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದರು.