ಮಾನ್ವಿಯಲ್ಲಿ ಭಾನುವಾರ ಏರ್ಪಡಿಸಿದ್ದ ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಆರ್. ತಿಮ್ಮಯ್ಯ ಶೆಟ್ಟಿ ಉದ್ಘಾಟಿಸಿದರು. ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ, ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಎಂ.ನಾಗರಾಜ ಇದ್ದರು. 
ಜಿಲ್ಲೆ

ಮಾನ್ವಿ ಸಹಕಾರಿ ಬ್ಯಾಂಕ್‌ಗೆ 2.65 ಕೋಟಿ ರೂ. ನಿವ್ವಳ ಲಾಭ

ಮಾನ್ವಿ: ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ 2.65 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾನ್ವಿ ಪಟ್ಟಣ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಆರ್.ತಿಮ್ಮಯ್ಯ ಶೆಟ್ಟಿ ಹೇಳಿದರು.

ಪಟ್ಟಣದ ಗಾಂಧಿ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ಯಾಂಕ್‌ನ 30ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

2024-25ನೇ ಸಾಲಿನಲ್ಲಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆ ನಿರ್ಬಂಧಗಳನ್ನು ಜು.1ರಿಂದ ಅನ್ವಯವಾಗುವಂತೆ ತೆಗೆದು ಹಾಕಿದೆ. ಪ್ರಸಕ್ತ ವರ್ಷ ಬ್ಯಾಂಕ್ ಸ್ವಂತ ಬಂಡವಾಳದಲ್ಲಿ 3.25 ಕೋಟಿ ರೂ. ಹಾಗೂ ಸಾಲದ ಪ್ರಮಾಣದಲ್ಲಿ 3.73 ಕೋಟಿ ರೂ. ಹೆಚ್ಚಳವಾಗಿದೆ.

ಅಲ್ಲದೇ ಬ್ಯಾಂಕ್‌ನ ಅನುತ್ಪಾದನಾ ಸಾಲದ ನಿವ್ವಳ ಪ್ರಮಾಣ ಶೇ.4.95 ರಷ್ಟಿದ್ದು, ಈ ಸಾಲಿನಲ್ಲಿ ಬಹುತೇಕ ದೊಡ್ಡ ಪ್ರಮಾಣದ ಸುಸ್ತಿ ಸಾಲ ವಸೂಲಾಗಿದ್ದರಿಂದ ಅನುತ್ಪಾದನಾ ಸಾಲದ ಪ್ರಮಾಣ ಕಡಿಮೆಯಾಗಲು ಸಾಧ್ಯವಾಗಿದೆ. ಬ್ಯಾಂಕ್ ರಾಜ್ಯಾದ್ಯಂತ 11 ಶಾಖೆ ಹೊಂದಿದ್ದು, ಗ್ರಾಹಕರು, ನಿರ್ದೇಶಕರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿದೆ. ಸಿಬ್ಬಂದಿ ಪರಿಶ್ರಮದಿಂದ ಅತ್ಯುತ್ತಮ ಬ್ಯಾಂಕ್ ಎಂದು ಖ್ಯಾತಿ ಪಡೆದಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಎಂ.ನಾಗರಾಜ ಬ್ಯಾಂಕ್ ವಾರ್ಷಿಕ ವರದಿ ಮಂಡಿಸಿದರು. ಬ್ಯಾಂಕ್ ಲಾಭ-ನಷ್ಟದ ಕುರಿತು ವರದಿಯನ್ನು ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣ ಮಂಡಿಸಿದರು. ಜಿಪಂ ಮಾಜಿ ಅಧ್ಯಕ್ಷ ದೊಡ್ಡ ಬಸಪ್ಪಗೌಡ ಭೋಗಾವತಿ, ಬ್ಯಾಂಕ್ ಉಪಾಧ್ಯಕ್ಷೆ ಡಾ.ರೋಹಿಣಿ ಮಾನ್ವಿಕರ್, ನಿರ್ದೇಶಕರಾದ ಡಿ.ರಾಮಚಂದ್ರಶೆಟ್ಟಿ, ಜಿ.ರಾಮಕೃಷ್ಣ, ಬಿ.ಎಚ್.ಕೃಷ್ಣಾರೆಡ್ಡಿ, ಆರ್.ವೈಜನಾಥಶೆಟ್ಟಿ, ಆರ್.ಶ್ರೀನಾಥ ಶೆಟ್ಟಿ, ಮುದ್ದುರಂಗರಾವ್ ಮುತಾಲಿಕ್, ರಾಮಲಿಂಗಪ್ಪ, ಎಂ.ಭಾಸ್ಕರ್, ಜಿ.ಚಂದ್ರಕಲಾ, ಜಿ.ರಮೇಶಬಾಬು, ಮಲ್ಲಿಕಾರ್ಜುನ ನಾಯಕ ಗುಡದಿನ್ನಿ, ಶ್ರೀನಿವಾಸ ಕುಮಾರ, ಬಿ.ಗೋಪಿಕೃಷ್ಣ ಇದ್ದರು.