ಮಾನ್ವಿ ತಾಲೂಕಿನ ಚೀಕಲಪರ್ವಿಯಿಂದ ಹಾಲ್ವಿ ಚರಣಗಿರಿ ಮಠಕ್ಕೆ ಸದಾಶಿವ ಶ್ರೀಗಳ ನೇತೃತ್ವದಲ್ಲಿ ಭಕ್ತರು ಪಾದಯಾತ್ರೆ ನಡೆಸಿದರು. ಪ್ರಮುಖರಾದ ಶರಣಬಸವ ದೇವರು, ಬಳಗನೂರು ಮಠದ ಸಿದ್ಧಬಸವ ಸ್ವಾಮೀಜಿ, ಬಸವರಾಜ ಇದ್ದರು. 
ಜಿಲ್ಲೆ

ಹಾಲ್ವಿ ಚರಣಗಿರಿ ಮಠಕ್ಕೆ ಭಕ್ತರ ಪಾದಯಾತ್ರೆ

ಮಾನ್ವಿ: ತಾಲೂಕಿನ ಚೀಕಲಪರ್ವಿ ಗ್ರಾಮದಿಂದ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಹಾಲ್ವಿ ಚರಣಗಿರಿ ಶ್ರೀಮಠಕ್ಕೆ ಭಕ್ತರು ಪಾದಯಾತ್ರೆ ಶುಕ್ರವಾರ ಕೈಗೊಂಡರು. ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಮಹಾಂತ ಮಹಾಶಿವಯೋಗಿಗಳ ಪುಣ್ಯಸ್ಮರಣೆ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತರು ಹಾಗೂ ವಿವಿಧ ಮಠಾಧೀಶರು ಪ್ರತಿವರ್ಷ ಪಾದಯಾತ್ರೆ ಮೂಲಕ ತೆರಳುತ್ತಾರೆ. ಅರಳಿಹಳ್ಳಿ ಮಠದ ಶರಣಬಸವ ದೇವರು, ಬಳಗನೂರು ಮರಿಶಿವಯೋಗಿಗಳ ಮಠದ ಸಿದ್ದಬಸವ ಸ್ವಾಮೀಜಿ, ನಿರಂಜನ ಸ್ವಾಮೀಜಿ ಸೇರಿ ನೂರಾರು ಭಕ್ತರು ಭಜನೆಯ ಮೂಲಕ ಪಾದಯಾತ್ರೆ ಮಾಡಿದರು.