ಮಾನ್ವಿ ತಾಲೂಕಿನ ಉಮಳಿಹೊಸೂರು ಗ್ರಾಮದಲ್ಲಿ ಸಿಂಧನೂರಿನ ರಂಭಾಪುರ ಶಾಖಾ ಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಮಾಲರ್ಪಣೆ ಮಾಡಿದರು. ಚೀಕಲಪರ್ವಿ ಮಠದ ಸದಾಶಿವ ಸ್ವಾಮೀಜಿ, ಗೊರೇಬಾಳ ಮಹಾದೇವಪ್ಪ ಇತರರಿದ್ದರು. 
ಜಿಲ್ಲೆ

ಪುಟ್ಟರಾಜ ಗವಾಯಿಗಳು ಅಂದರ ಆಶಾಕಿರಣ

ಮಾನ್ವಿ: ಲಕ್ಷಾಂತರ ಅಂದ, ಅನಾಥ ಮಕ್ಕಳಿಗೆ ಸಂಗೀತ ಕಲಿಸಿ ಬಾಳು ಬೆಳಕಾಗಿಸಿದ ಪಂಡಿತ್ ಪುಟ್ಟರಾಜ ಗವಾಯಿಗಳು ಅಂದರ ಪಾಲಿನ ಆಶಾಕಿರಣ ಎಂದು ಚೀಕಲಪರ್ವಿ ರುದ್ರಮುನೀಶ್ವರ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ತಾಲೂಕಿನ ಉಮಳಿಹೊಸೂರು ಗ್ರಾಮದ ವಿರೂಪಾಕ್ಷ ಶಾಸ್ತ್ರಿಗಳವರ ಕಲ್ಯಾಣ ಮಂಟಪದಲ್ಲಿ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ 13ನೇ ಪುಣ್ಯಸ್ಮರಣೋತ್ಸವ, ಲಿಂ.ಪಂಡಿತ್ ವಿರೂಪಾಕ್ಷ ಶಾಸ್ತ್ರಿಗಳವರ ಹಾಗೂ ಲಿಂ. ಗೌರಮ್ಮ ನವರ ಪುಣ್ಯಾಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶರಣ ಚರಿತಾಮೃತ ಪ್ರವಚನ, ಶಿವಾನುಭವ ಮತ್ತು ಸಂಗೀತ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ಹಾನಗಲ್ ಗುರು ಕುಮಾರ ಶಿವಯೋಗಿಗಳು ನಾಡಿನ ಸಂಸ್ಕೃತಿಕ ಹಾಗೂ ಧಾರ್ಮಿಕ ಉನ್ನತಿಗಾಗಿ ಶಿವಯೋಗ ಮಂದಿರ ಸ್ಥಾಪಿಸಿ ಪಂಡಿತ್ ಪಂಚಾಕ್ಷರ ಗವಾಯಿಗಳಿಗೆ ಆಶ್ರಯ ನೀಡಿ ಸಂಗೀತ ಶಿಕ್ಷಣ ನೀಡಿದ್ದರಿಂದ, ಇಂದು ಲಕ್ಷಾಂತರ ಅಂದ-ಅನಾಥ ಮಕ್ಕಳು ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಆಶ್ರಯ ಪಡೆದು ಸಂಗೀತ ಅಭ್ಯಾಸ ಮಾಡಲು ಸಾಧ್ಯವಾಗಿದೆ ಎಂದರು.

ಪುಟ್ಟರಾಜ ಗವಾಯಿಗಳು ಗುರು ಪರಂಪರ ಮುಂದುವರಿಕೆಗಾಗಿ ನಾಡಿನಾದ್ಯಂತ ಸಂಚಾರಿಸಿ ತಮ್ಮ ಜೋಳಿಗೆಯಲ್ಲಿ ಅಂದ-ಆನಾಥ ಮಕ್ಕಳನ್ನು ತುಂಬಿಸಿಕೊಂಡು ಅವರ ಬದುಕನ್ನು ಹಸನಾಗಿದ್ದಾರೆ. ಲಿಂ.ಪಂಡಿತ ವಿರೂಪಾಕ್ಷ ಶಾಸ್ತ್ರಿಗಳು ಹಾಗೂ ಲಿಂ.ಗೌರಮ್ಮನವರ ಆದರ್ಶವನ್ನು ಬದಕಿನಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಿದ್ದಾರೆ ಎಂದು ತಿಳಿಸಿದರು.

ಸಿಂಧನೂರಿನ ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ, ತುರ್ವಿಹಾಳ ಹಿರೇಮಠದ ಅಮರಗುಂಡ ಶಿವಾಚಾರ್ಯ ಸ್ವಾಮೀಜಿ, ಚಿತ್ರಾಲಿ ಶಾಂಭವಿ ಶಕ್ತಿ ಪೀಠದ ವಿನಾಯಕ ಸ್ವಾಮೀಜಿ, ಬಲ್ಲಟಗಿ ಹಿರೇಮಠದ ಬಸಯ್ಯತಾತ, ಕಿಡಿಗಣಯ್ಯ ಸ್ವಾಮಿ, ವಕೀಲ ಎ.ಬಿ.ಉಪಳಮಠ, ವೀರಭದ್ರಯ್ಯ ಸ್ವಾಮಿ ಇತರರಿದ್ದರು.