ಸಾರಿಗೆ ಇಲಾಖೆ ಮಾನ್ವಿ ಘಟಕದ ವ್ಯವಸ್ಥಾಪಕರ ರಾಜೇಂದ್ರ ನಾಯಕಗೆ ಮಂಗಳವಾರ ಜಯ ಕರವೇ ಸಂಘಟನೆ ಕಾರ್ಯಕರ್ತರು ಮನವಿ ಸಲ್ಲಿಸಿದರು. 
ಜಿಲ್ಲೆ

ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಜಯ ಕರ್ನಾಟಕ ರಕ್ಷಣ ವೇದಿಕೆ ಒತ್ತಾಯ

ಮಾನ್ವಿ: ಶಾಲೆ, ಕಾಲೇಜ್‌ಗಳಿಗೆ ಹೋಗಿ ಬರಲು ತಾಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳಿಗಾಗಿ ಬಸ್‌ಗಳ ಓಡಾಟವನ್ನು ಸಮರ್ಪಕವಾಗಿ ಕಲ್ಪಿಸಿವಂತೆ ಜಯ ಕರ್ನಾಟಕ ರಕ್ಷಣ ವೇದಿಕೆ ಒತ್ತಾಯಿಸಿದೆ.

ಸಾರಿಗೆ ಘಟಕ ವ್ಯವಸ್ಥಾಪಕ ರಾಜೇಂದ್ರ ನಾಯಕಗೆ ಮುಖಂಡರು ಮಂಗಳವಾರ ಮನವಿ ಸಲ್ಲಿಸಿತು. ಅನೇಕ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್‌ಗಳು ಸಿಗದ ಕಾಋಣ ಅವರು ತರಗತಿಗಳಿಗೆ ಗೈರಾಗುತ್ತಿದ್ದಾರೆ. ಕೆಲ ಬಸ್ ಚಾಲಕರು, ನಿರ್ವಾಹಕರು ಬಸ್ ಪಾಸ್ ಇರುವ ವಿದ್ಯಾರ್ಥಿಗಳನ್ನು ನೋಡಿದರೂ ಬಸ್ ನಿಲ್ಲಿಸದೇ ಹಾಗೇ ಹೋಗುತ್ತಿದ್ದಾರೆ. ಆದ್ದರಿಂದ ಅಂತಹ ಚಾಲಕ, ನಿರ್ವಾಹಕರಿಗೆ ಬಸ್‌ಗಳನ್ನು ನಿಲ್ಲುಸುವಂತೆ ಸೂಚಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘಟನೆ ತಾಲೂಕು ಅಧ್ಯಕ್ಷ ರಾಜಾ ವಿಜಯಕುಮಾರ ನಾಯಕ, ಅಮರೇಶ ಕಾವಲಿ, ಶ್ರೀಕಾಂತ, ರವಿಚಂದ್ರ ನಾಯಕ, ಬಸವರಾಜ, ಜಲಾಲ್, ತಿಮ್ಮಪ್ಪ ನಾಯಕ, ಆನಂದ ದವಖಾನೆ, ಶಶಿಕುಮಾರ ಹಿರೇಮಠ, ಬಸವರಾಜ ನಿಲೋಗಲ್ ಇತರರು ಇದ್ದರು.