ಮಾನ್ವಿಯ ಕೃಷಿ ಉತ್ಪನ ಮಾರುಕಟೆ ಸಮಿತಿ ಆವರಣದ ಉದ್ಭವ ಆಂಜನೇಯ್ಯ ಸ್ವಾಮಿ ದೇವಸ್ಥಾನದಲ್ಲಿ 20ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಸ್ವಾಮಿ ಮೆರವಣಿಗೆ ಶನಿವಾರ ಜರುಗಿತು. 
ಜಿಲ್ಲೆ

ಉದ್ಭವ ಆಂಜನೇಯ್ಯಸ್ವಾಮಿ ಜಾತ್ರೋತ್ಸವ

ಮಾನ್ವಿ: ಪಟ್ಟಣದ ಕೃಷಿ ಉತ್ಪನ ಮಾರುಕಟೆ ಸಮಿತಿ ಆವರಣದ ಉದ್ಭವ ಆಂಜನೇಯ್ಯಸ್ವಾಮಿ ದೇವಸ್ಥಾನದಲ್ಲಿ 20ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಶ್ರಾವಣ ಶನಿವಾರ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರುಗಿದವು.

ಬೆಳಗ್ಗೆ ಶ್ರೀಸ್ವಾಮಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ತುಳಸಿ ಪುಷ್ಪಾರ್ಚನೆ, ಪವಮಾನ ಹೋಮ ಹಾಗೂ ಪೂರ್ಣಾಹುತಿ, ಮಹಾ ಮಂಗಳಾರತಿ ನೆವೇರಿದವು.

ಅಂಬೇಡ್ಕರ್ ವೃತ್ತದ ಮಹಾಲಕ್ಷ್ಮೀ ದೇವಸ್ಥಾನದಿಂದ ಉದ್ಭವ ಆಂಜನೇಯ್ಯ ಸ್ವಾಮಿ ದೇವಸ್ಥಾನದವರೆಗೆ ಸುಮಂಗಲಿಯರು ಕುಂಭ, ಕಳಸದೊಂದಿಗೆ ಮಾರುತಿ ಭಜನಾ ತಂಡದವರಿಂದ ಆಂಜನೇಯ್ಯ ಸ್ವಾಮಿ ಭಾವಚಿತ್ರ ಮೆರವಣಿಗೆ ನಡೆಯಿತು.