ರಾಯಚೂರಿನ ಕನ್ನಡ ಭವನದಲ್ಲಿ ಕ್ರಾಂತಿಕಾರಿ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಜನತಾ ಸಾಂಸ್ಕೃತಿಕ ಶಿಬಿರ ಮತ್ತು ಬಹು ಬಾಷಾ ಕವಿಗೋಷ್ಠಿಯಲ್ಲಿ ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಮಾತನಾಡಿದರು. ಆರ್‌ಸಿಎ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತುಹೀನ್ ದೆಬ್, ಪದಾಕಾರಿಗಳಾದ ಆಶಿಮಗಿರಿ, ಎಂ.ಗಂಗಾಧರ, ವೇಣುಗೋಪಾಲ, ಸಾಹಿತಿ ದಾನಪ್ಪ ನಿಲೋಗಲ್ ಇದ್ದರು. 
ಜಿಲ್ಲೆ

ಮನು ಸಂಸ್ಕೃತಿ ಜನರ ಮೇಲೆ ಹೇರುವ ಅಜಂಡಾ

ರಾಯಚೂರು: ದೇಶದ ಬಹು ಸಂಸ್ಕೃತಿಯನ್ನು ನಾಶ ಮಾಡುವ ಮೂಲಕ ಆರ್‌ಎಸ್‌ಎಸ್ ಮತ್ತು ಬಿಜೆಪಿ ಮನು ಸಂಸ್ಕೃತಿಯನ್ನು ಜನರ ಮೇಲೆ ಹೇರುವ ಅಜಂಡಾ ಹೊಂದಿವೆ ಎಂದು ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತುಹೀನ್ ದೆಬ್ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಜನತಾ ಸಾಂಸ್ಕೃತಿಕ ಶಿಬಿರ ಮತ್ತು ಬಹು ಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಶ್ರಮ ಸಂಸ್ಕೃತಿಯನ್ನು ಅಲಿಸಿ ಅದರ ಜಾಗದಲ್ಲಿ ಕಾರ್ಪೋರೇಟ್ ಸಂಸ್ಕೃತಿಯನ್ನು ಜಾರಿ ಮಾಡಲು ಹೊರಟಿದೆ ಎಂದರು.
ಸಂವಿಧಾನ, ಪ್ರಜಾತಂತ್ರ, ಜಾತ್ಯಾತೀತೆ, ಮೀಸಲಾತಿಯನ್ನು ಉಳಿಸಲು ಸಾಂಸ್ಕೃತಿಕವಾಗಿ ತೀವ್ರ ಸಂಘರ್ಷಕ್ಕೆ ಇಳಿಯಬೇಕಾಗಿದೆ. ಲೋಕಸಭೆ ಚುನಾವಣೆಯಲ್ಲಿ ್ಯಾಸಿಸ್ಟ್ ಬಿಜೆಪಿಯನ್ನು ಸೋಲಿಸಲು ಆರ್‌ಸಿಎ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ದಾನಪ್ಪ ನಿಲೋಗಲ್ ಮಾತನಾಡಿ, ಕಾರ್ಪೋರೆಟ್ ಸಂಸ್ಕೃತಿಯನ್ನು ಹಿಮ್ಮೆಟ್ಟಿಸಲು ಕವಿಗೋಷ್ಠಿಯಲ್ಲಿ ವಾಚಿಸಲಾದ ಕವನಗಳು ನಕಲಿ ದೇಶಪ್ರೇಮ, ಆರ್‌ಎಸ್‌ಎಸ್, ಬಿಜೆಪಿಯ ಬಣ್ಣವನ್ನು ಬಯಲುಗೊಳಿಸಿವೆ. ಜನ ತಾಂತ್ರಿಕತೆಯನ್ನು ದೇಶಕ್ಕೆ ರವಾನಿಸುವ ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು.
ಟಿಯುಸಿಐ ಪ್ರಧಾನ ಕಾರ್ಯದರ್ಶಿ ಆರ್.ಮಾನಸಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಕವಿಗೋಷ್ಠಿಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ 20ಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಆರ್‌ಸಿಎ್ ಪದಾಕಾರಿಗಳಾದ ಆಶಿಮಗಿರಿ, ಎಂ.ಗಂಗಾಧರ, ವೇಣುಗೋಪಾಲ, ಬಾಲಕೃಷ್ಣ, ರಾಮಣ್ಣ, ವೆಂಕಟೇಶ, ಹೀಮ್, ನಿರಂಜನ್ ಅಜಾದ್, ಎಂ.ಆರ್.ಭೇರಿ, ಅಜೀಜ್ ಜಾಗೀರದಾರ್, ಅನುಪಮ, ಸ್ಟಾಲಿನ್ ಉಪಸ್ಥಿತರಿದ್ದರು.