ರಾಯಚೂರು: ಕೋವಿಡ್ ಸೋಂಕು ಅವರಿವರೆನ್ನದೆ ಎಲ್ಲರನ್ನೂ ಒಂದು ರೀತಿಯಲ್ಲಿ ಬಲಿ ಪಡೆಯುತ್ತಿದ್ದು ಇದೀಗ ಮಂತ್ರಾಲಯದ ಶ್ರೀಸುಬುಧೇಂದ್ರ ತೀರ್ಥರ ಆಪ್ತ ಕಾರ್ಯದರ್ಶಿ ಎಸ್.ಎನ್. ಸುಯಮೀಂದ್ರಾಚಾರ್ ಅವರೂ ಕೋವಿಡ್‌ನಿಂದಾಗಿ ಮೃತಪಟ್ಟಿರುವ ವಿಷಯ ಹೊರಬಿದ್ದಿದೆ. ಕೆಲವು ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಅವರು ಇಂದು ದೆಹಲಿಯ ಆಸ್ಪತ್ರೆಯೊಂದರಲ್ಲಿ ಮೃತಪಟ್ಪಿದ್ದಾರೆ.
ಇವರಲ್ಲಿ ಕೋವಿಡ್-19 ಸೋಂಕು ಇರುವುದು ಕೆಲವು ದಿನಗಳ ಹಿಂದೆ ದೃಢಪಟ್ಟಿದ್ದು, ಸೂಕ್ತ ಮುನ್ನೆಚ್ಚರಿಕೆ ವಹಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಅದಾಗ್ಯೂ ಚಿಕಿತ್ಸೆ ಫಲಕಾರಿಯಾಗದ್ದರಿಂದ ಇಂದು ಸಂಜೆ ಕೊನೆಯುಸಿರೆಳೆದರು. ಪೂರ್ವಾಶ್ರಮದಲ್ಲಿ ಇವರು ಶ್ರೀಮಠದ ಪೂರ್ವ ಪೀಠಾಧಿಪತಿ ಶ್ರೀ ಸುಯತೀಂದ್ರತೀರ್ಥರ ಪುತ್ರರು.