ನಾಪೋಕ್ಲು:
ಸಾರ್ವಜನಿಕರು ಮನೆ ನಿರ್ಮಾಣ ಮಾಡಿ ಸರ್ಕಾರದ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು. ಸಮೀಪದ ಹೊದ್ದೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಬಸವ ವಸತಿ ಯೋಜನೆ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 26 ಫಲಾನುಭಾವಿಗಳಿಗೆ ವಸತಿ ನಿರ್ಮಾಣ ಕಾರ್ಯದೇಶ ಪತ್ರ ವಿತರಿಸಿ ಶನಿವಾರ ಮಾತನಾಡಿದರು.
ಹೆಚ್ಚುವರಿ ಮನೆ ಮಂಜೂರು ಮಾಡಲು ಸಹಕರಿಸಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರನ್ನು ಸ್ಮರಿಸಿಕೊಂಡ ಶಾಸಕರು ಪಾರದರ್ಶಕವಾಗಿ ಮನೆ ನೀಡಲಾಗಿದೆ, ಸರ್ಕಾರದ ಉಚಿತ ವಸತಿ ಯೋಜನೆಗೆ ಯಾವುದೇ ಹಣ ಯಾರಿಗೂ ಫಲಾನುಭವಿಗಳು ನೀಡುವ ಅಗತ್ಯವಿಲ್ಲ ಎಂದರು.
ಇದೇ ವೇಳೆ ಗ್ರಾಮ ಪಂಚಾಯತಿ ಅನುದಾನದಲ್ಲಿ 5 ಅಂಗನವಾಡಿ ಕೇಂದ್ರಗಳಿಗೆ ಸ್ಮಾರ್ಟ್ ಟಿವಿ ವಿತರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ, ಸದಸ್ಯರಾದ ಮೊಣ್ಣಪ್ಪ, ಕುಸುಮಾವತಿ, ಚೌರಿರ ಅನಿತಾ, ಮೈದು ಕೊಟ್ಟಮುಡಿ, ಎಂ. ಬಿ. ಹಮೀದ್ ಕಬಡಕೇರಿ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್, ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಶೇಖರ್, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾ ಲಕ್ಷ್ಮೀ, ಪಿಡಿಒ ಅಬ್ದುಲ್ಲಾ ಮತ್ತಿತರರು ಈ ಸಂದರ್ಭ ಇದ್ದರು.