ಜಿಲ್ಲೆ

ಕುಂಭಮೇಳದಲ್ಲಿ ಮಂತರ್ ಪುಣ್ಯಸ್ನಾನ

ಸುನಿಲ್ ಪೊನ್ನೇಟಿ
ಮಡಿಕೇರಿ:
ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಮ್ಮ ವಿವಾಹ ವಾರ್ಷಿಕೋತ್ಸವ ದಿನವಾದ ಸೋಮವಾರ ಕುಂಭ ಮೇಳದಲ್ಲಿ ಕುಟುಂಬ ಸಮೇತ ಭಾಗಿಯಾಗಿದ್ದರು. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ  ಶಾಸಕ  ಡಾ.ಮಂತರ್ ಗೌಡ ಪತ್ನಿ ದಿವ್ಯಾ ಮಂತರ್ ಹಾಗೂ ಕುಟುಂಬದ ಸದಸ್ಯರುಗಳೊಂದಿಗೆ  ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ನೆರವೇರಿಸಿದರು. '144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ನನ್ನ ವಿವಾಹ ವಾರ್ಷಿಕೋತ್ಸವದ ಸುದಿನದಂದೇ ಅವಕಾಶ ಸಿಕ್ಕಿದ್ದು ನಿಜಕ್ಕೂ ಸಂತಸ ತಂದಿದೆ ಎಂದು  ಶಾಸಕ  ಡಾ. ಮಂತರ್ ಗೌಡ  ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.