ಜಿಲ್ಲೆ

ಶಾಸಕ ಡಾ. ಮಂತರ್ ಗೌಡ ಜನ್ಮದಿನಾಚರಣೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಶಾಸಕ ಡಾ. ಮಂತರ್ ಗೌಡ ಅವರ 40ನೇ ಜನ್ಮ ದಿನಾಚರಣೆ ಪ್ರಯುಕ್ತ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳಿಗೆ ಶುಕ್ರವಾರ ಶೈಕ್ಷಣಿಕ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಿಟ್‌ಗಳನ್ನು ವಿತರಿಸಿ, ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳು ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

ಕಾಂಗ್ರೆಸ್ ಪ್ರಮುಖರಾದ ವಿ.ಜಿ. ಮೋಹನ್ ಗೌಡ, ಹಂಚೆಟ್ಟಿರ ಮನು ಮುದ್ದಪ್ಪ, ಕಾನೆಹಿತ್ಲು ಮೊಣ್ಣಪ್ಪ, ಉದಯ ಕುಮಾರ್, ಹರಿಪ್ರಸಾದ್ ಕೋಚನ, ಮಿನಾಜ್ ಪ್ರವೀಣ್, ಕವನ್ ಕೊತ್ತೋಳಿ, ಅರ್ಜುನ್, ಸುಬ್ರಮಣಿ, ಕೌಸರ್, ರಾಜು, ಉಳುವಾರನ ಪವಿತ್ರ, ಆದಿಲ್, ರಂಜಿತ್ ಸುಬ್ಬಯ್ಯ, ಬಾಲಕರ ಬಾಲಮಂದಿರದ ಸಿಬ್ಬಂದಿ ಮತ್ತಿತರರು ಇದ್ದರು.

ಎನ್‌ಎಸ್‌ಯು ಸಂಘನೆ ವತಿಯಿಂದ ಮಡಿಕೇರಿ ಶಕ್ತಿ ವೃದ್ದಾಶ್ರಮದಲ್ಲಿ ಆಶ್ರಮವಾಸಿಗಳಿಗೆ ಶುಕ್ರವಾರದ ಊಟದ ವ್ಯವಸ್ಥೆ ಮಾಡಲಾಗಿತ್ತು. ಸಂಘಟನೆ ಜಿಲ್ಲಾಧ್ಯಕ್ಷ ಮುತ್ತು ರಾಶಿದ್, ಪ್ರಧಾನ ಕಾರ್ಯದರ್ಶಿ ಪ್ರತಾಪ್, ರೂನೈಜ್, ಬ್ಲಾಕ್ ಅಧ್ಯಕ್ಷ ಶರಣ್ ಮತ್ತಿತರರು ಇದ್ದರು.

ಮಡಿಕೇರಿ ನಗರ ಕಾಂಗ್ರೆಸ್ ಪದಾಧಿಕಾರಿಗಳು ಶ್ರೀ ಶಕ್ತಿ ವೃದ್ಧಾಶ್ರಮ ಮತ್ತು ತನಲ್ ಆಶ್ರಮಗಳಿಗೆ ಭೇಟಿ ನೀಡಿ ಆಶ್ರಮವಾಸಿಗಳಿಗೆ ಉಪಚಾರದ ವ್ಯವಸ್ಥೆ ಮಾಡಿದರು. ಮುಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ , ಕೆಪಿಸಿಸಿ ಸದಸ್ಯರಾದ ನಂದಕುಮಾರ್, ಪ್ರಕಾಶ್ ಆಚಾರ್ಯ, ಚಂದ್ರಶೇಖರ್ ಆರ್ ಪಿ, ಜಗದೀಶ್ ಜೆ.ಸಿ. ಮತ್ತಿತರರು ಇದ್ದರು.