ವಿಜಯವಾಣಿ ಸುದ್ದಿಜಾಲ ಧಾರವಾಡ
ಕುತೂಹಲವೇ ವಿಜ್ಞಾನ ಅಧ್ಯಯನದ ಮೂಲ. ಯಾವುದೇ ವಿಷಯವಾದರೂ ಏಕೆ, ಹೇಗೆ ಎಂಬ ಪ್ರಶ್ನೆಗಳು ಮೂಡಿದಾಗ ತಳಸ್ಪರ್ಶಿ ಅಧ್ಯಯನ ಮಾಡಲು ಸಾಧ್ಯ ಎಂದು ಧಾರವಾಡ ಐಐಟಿ ಡೀನ್ ಡಾ. ಎಂ.ಎಸ್. ಶಿವಪ್ರಸಾದ್ ಹೇಳಿದರು.
ನಗರದ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯಲ್ಲಿ ಆರಂಭಿಸಿದ `ಮನೋಜ್ಞ' ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ. ಪ್ರಲ್ಹಾದ ಹಂಚಿನಮನಿ ಮಾತನಾಡಿ, ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದಿ0ದ ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ನೀಡಿದರೆ ಮುಂದೆ ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಪ್ರವೇಶ ಪಡೆಯಲು ಸಮರ್ಥರಾಗುವರು. ಸಂಸ್ಥೆಯ ಕಾರ್ಯದರ್ಶಿ ಮನೋಜ ಹಂಚಿನಮನಿ ಅವರ ಕನಸು ನನಸು ಮಾಡಲು `ಮನೋಜ್ಞ' ತರಬೇತಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ, ವಿಪಿಎಚ್ ಪಿಯು ಕಾಲೇಜ್ ಪ್ರಾಚಾರ್ಯ ರಾಜು ಕಡೆಮನಿ, ಇತರರಿದ್ದರು. ಪ್ರಾಚಾರ್ಯ ವಿದ್ವಾನ್ ನವೀನ್ ಭಟ್ ಪರಿಚಯಿಸಿದರು.