Mannurqa Yallamma Temple Submurged in Bheema River 
ಜಿಲ್ಲೆ

ಮಣ್ಣೂರ ಯಲ್ಲಮ್ಮ ಗುಡಿ ಮುಳುಗಡೆ : ರೆಡ್ ಅಲರ್ಟ್

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ ೧.೮೧ ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಬಿಡುತ್ತಿರುವುದರಿಂದ ಸುಕ್ಷೇತ್ರ  ಮಣ್ಣೂರ ಗ್ರಾಮದ ಆರಾಧ್ಯ ದೈವವಾಗಿರುವ ಯಲ್ಲಮ್ಮದೇವಿ ದೇವಾಲಯ ಭೀಮಾ ಪ್ರವಾಹದಲ್ಲಿ ಬಹುತೇಕ ಮುಳುಗಡೆಯಾಗಿದೆ. ಭಕ್ತರ ದರ್ಶನ ಮತ್ತು ಪೂಜೆ ತಾತ್ಕಾಲಿಕವಾಗಿ ನಿಂತಿವೆ. ಎರಡು ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ವಿಜಯಪುರ, ಸಿಂದಗಿ,ಜೇವರ್ಗಿ ಮಾರ್ಗವಾಗಿ ಗಾಣಗಾಪುರ ಮತ್ತು ಘತ್ತರಗಿಗೆ ಬರುವರು ಸುತ್ತುಹೊಡೆದು ಅಫಜಲಪುರ ಮಾರ್ಗವಾಗಿ ಬರಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.