ಮಣ್ಣಗುಡ್ಡೆ ಗುರ್ಜಿ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಮಹಾಲಿಂಗೇಶ್ವರ ಬಜಕೂಡ್ಲು ತಂಡ ಚಾಂಪಿಯೆನ್ ಆಗಿ ಮೂಡಿ ಬಂದಿದೆ. 
ಜಿಲ್ಲೆ

ಮಣ್ಣಗುಡ್ಡೆ ಗುರ್ಜಿ ಕಪ್ ಕ್ರಿಕೆಟ್ ಪಂದ್ಯಾಟ ಸಂಪನ್ನ

ಮಂಗಳೂರು: ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್ ಮತ್ತು ಮಣ್ಣಗುಡ್ಡೆ ಗುರ್ಜಿ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಉರ್ವ ಮಾರ್ಕೆಟ್ ಮೈದಾನದಲ್ಲಿ 13 ಮಣ್ಣಗುಡ್ಡೆ ಗುರ್ಜಿ ಕಪ್ ಕ್ರಿಕೆಟ್ ಪಂದ್ಯಾಟ ನಡೆಯಿತು.

ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ಪಂದ್ಯಟ ಉದ್ಘಾಟಿಸಿದರು. ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಹನ್ನೆರಡು ತಂಡಗಳು ಭಾಗವಹಿಸಿದ್ದವು. ಮಹಾಲಿಂಗೇಶ್ವರ ಬಜಕೂಡ್ಲು ತಂಡ ಪಂದ್ಯ ವಿಜೇತರಾದರೆ, ವಿಪ್ರಾ ಬಾಯ್ಸ ಮೂಡುಬಿದಿರೆ ತಂಡ ದ್ವಿತೀಯ ಸ್ಥಾನ ಪಡೆಯಿತು. ವಿಪ್ರಾ ಬಾಯ್ಸ ತಂಡದ ನರೇಶ್ ಅವರನ್ನು ಶ್ರೇಷ್ಠ ಬ್ಯಾಟ್ಸ್ ಮನ್, ಮಹಾಲಿಂಗೇಶ್ವರ ಬಜಕೂಡ್ಲು ತಂಡದ ಸುಕೇಶ್ ಅವರು ಶ್ರೇಷ್ಠ ಬೌಲರ್ ಮತ್ತು ಪಂದ್ಯ ಶ್ರೇಷ್ಠ, ಮಹಾಲಿಂಗೇಶ್ವರ ಬಜಕೂಡ್ಲು ತಂಡದ ಸುನೀಲ್ ಅವರು ಪಂದ್ಯಾವಳಿಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಕಾರ್ಯಕ್ರಮದಲ್ಲಿ ವಿವಿಧ ತಂಡಗಳ ಹಿರಿಯ ಆಟಗಾರರನ್ನು ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕಲ್ಭಾವಿ ಕ್ಯಾಶ್ಯೂಸಿನ ಮಾಲಿಕ ್ರಕಾಶ್ ರಾವ್ ಕಲ್ಭಾವಿ, ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಮಹಿಳಾ ಘಟಕದ ಕಾರ್ಯದರ್ಶಿ ಮನೋರಮ ಉಮೇಶನ್ ವಿಜೇತರಿಗೆ ಬಹುಮಾನ ವಿತರಿಸಿದರು.

ಮಣ್ಣಗುಡ್ಡೆ ಗುರ್ಜಿ ಸೇವಾ ಸಮಿತಿ ಟ್ರಸ್ಟ್ ಸಮಿತಿ ಪದಾಧಿಕಾರಿಗಳಾದ ರಮಾನಂದ ಪಾಂಗಳ, ಭಾರ್ಗವ ತಂತ್ರಿ, ರಾಜೇಂದ್ರ ಕಲ್ಭಾವಿ, ಮೋಹನ್ ದಾಸ್, ಸರ್ವೇಶ್ ರಾವ್, ಸದಸ್ಯರು ಉಪಸ್ಥಿತರಿದ್ದರು.

ಮಣ್ಮಗುಡ್ಡೆ ಗುರ್ಜಿ ಕ್ರೀಡಾ ಸಮಿತಿಯ ಅಧ್ಯಕ್ಷ ವಿನಯಕ್ರಷ್ಣ, ಕಾರ್ಯದರ್ಶಿ ಶರತ್ ರಾವ್, ಕೋಶಾಧಿಕಾರಿ ಶ್ರೀರಾಮ್ ವಿ.ರಾವ್, ಮತ್ತು ಸಮಿತಿ ಸದಸ್ಯರ ಮೇಲ್ವಿಚಾರಣೆಯಲ್ಲಿ ಪಂದ್ಯ ನಡೆಯಿತು. ಪ್ರವೀಣ್ ಉಡುಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ದಿನೇಶ್, ದೀಕ್ಷಿತ್, ರಜನೀಶ್, ಸಚಿನ್ ಕಾಮತ್ ಪಂದ್ಯದ ಅಂಪೈರ್, ಕಾಮೆಂಟ್ರೇಟರ್, ಮತ್ತು ಸ್ಕೋರರ್‌ಗಳಾಗಿ ಸಹಕರಿಸಿದರು.