ಅಥಣಿ: ಮಾಜಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರ ಸರಳ, ಸಜ್ಜನ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಹೇಳಿದರು.
ಪಟ್ಟಣದ ಶಿವಯೋಗಿ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಸಿಂಗ್ ಬಡತನದಲ್ಲಿ ಅರಳಿದ ಪ್ರತಿಭೆ. ಅರ್ಥಶಾಸಜ್ಞ, ಪ್ರಧಾನಮಂತ್ರಿಯಾಗಿ ಅವರು ಸಲ್ಲಿಸಿದ ಸೇವೆೆ ಅನನ್ಯ ಎಂದರು.
ಪುರಸಭೆ ಸದಸ್ಯ ರಾವಸಾಹೇಬ ಐಹೊಳೆ ಮಾತನಾಡಿ, ಶ್ರೇಷ್ಠ ಆರ್ಥಿಕ ಉದಾರೀಕರಣದ ರೂವಾರಿಯಾಗಿ ದೇಶದ ಅರ್ಥ ವ್ಯವಸ್ಥೆ ಪುನಶ್ಚೇತನದಲ್ಲಿ ಮನಮೋಹನ್ ಸಿಂಗ್ ಪಾತ್ರ ಮಹತ್ವದ್ದು ಎಂದು ಹೇಳಿದರು.
ಪುರಸಭೆ ಸದಸ್ಯ ಉದಯ ಸೊಳಸಿ, ಕಾರ್ಯಕರ್ತರಾದ ಶಿವಾನಂದ ಸೌದಾಗರ, ಪ್ರಶಾಂತ ಇಜಾರೆ, ಉಮರ ಸೈಯದ್, ತೌಫೀಕ್ ಸಾಂಗ್ಲಿಕರ ಇತರರು ಇದ್ದರು.