ಕೊಳ್ಳೇಗಾಲ-ಹನೂರು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಮಂಜೂರಾದ ಜಾಗದ ಆದೇಶ ಪ್ರತಿಯನ್ನು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಅವರು ಕಾರ್ಯದರ್ಶಿ ಲಿಂಗರಾಜು ಅವರಿಗೆ ಹಸ್ತಾಂತರಿಸಿದರು. ಗೋವಿಂದರಾಜು, ಮುರುಡೇಶ್ವರಸ್ವಾಮಿ, ಶೇಷಣ್ಣ ಇತರರು ಇದ್ದರು. 
ಜಿಲ್ಲೆ

ಮಂಜೂರಾತಿ ಆದೇಶ ಪ್ರತಿ ವಿತರಣೆ

ಹನೂರು: ತಾಲೂಕಿನ ಮಂಗಲ ಗ್ರಾಮದ ಬಳಿ ಕೊಳ್ಳೇಗಾಲ-ಹನೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಬುಧವಾರ 0.70 ಸೆಂಟ್ ಜಾಗದ ಮಂಜೂರಾತಿ ಆದೇಶ ಪ್ರತಿಯನ್ನು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಕಾರ್ಯದರ್ಶಿ ಲಿಂಗರಾಜು ಅವರಿಗೆ ಹಸ್ತಾಂತರಿಸಿದರು.

ಸಂಘದ ಕಟ್ಟಡ, ಕಚೇರಿ ನಿರ್ಮಾಣ ಸಂಬಂಧ ಜಾಗದ ಅವಶ್ಯಕತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ವೇ ಕಾರ್ಯ ನಡೆಸಿ ಸರ್ಕಾರಿ ಜಾಗ ಗುರ್ತಿಸಿ ವರದಿ ಸಲ್ಲಿಸುವಂತೆ ಡಿಸಿ ಅವರು ತಾಲೂಕು ಆಡಳಿತಕ್ಕೆ ಸೂಚಿಸಿದ್ದರು.

ಮಂಗಲ ಗ್ರಾಮದ ಸರ್ವೇ ನಂ. 384/ಸಿ1 ಎ2ರಲ್ಲಿನ 1.17 ಎಕರೆ ಜಮೀನಿನ ಪೈಕಿ 0.70 ಸೆಂಟ್ ಜಾಗವನ್ನು ಸಂಘಕ್ಕೆ ನೀಡಬಹುದು ಎಂದು ವರದಿ ನೀಡಲಾಗಿದ್ದು, ಸ್ಥಳ ಮಂಜೂರಾಗಿತ್ತು. ಇದರ ಆದೇಶ ಪ್ರತಿಯನ್ನು ತಹಸೀಲ್ದಾರ್ ಅವರು ಸಂಘದ ಕಾರ್ಯದರ್ಶಿ ಅವರಿಗೆ ಹಸ್ತಾಂತರಿಸಿದರು.

ಸಂಘದ ಅಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ರಾಜಗೋಪಾಲ್ ನಿರ್ದೇಶಕರಾದ ಮುರಡೇಶ್ವರಸ್ವಾಮಿ, ಚಿಕ್ಕಮಾದನಾಯ್ಕ, ರೇಚಣ್ಣ, ರಾಜಸ್ವ ನಿರೀಕ್ಷಕ ಶೇಷಣ್ಣ, ತಾಲೂಕು ಭೂಮಾಪಕ ಸಿಂಗಾರಶೆಟ್ಟಿ ಇತರರು ಇದ್ದರು.