ಮಡಿಕೇರಿ: ಭಾರತೀಯ ಜೀವ ವಿಮಾ ನಿಗಮದ ಪ್ರತಿನಿಧಿ ಸಂಘಟನೆಯಾದ ಲಿಯಾಫಿ ಮಡಿಕೇರಿ ಘಟಕದ ಅಧ್ಯಕ್ಷರಾಗಿ ವಿ.ಎ.ಮಂಜುನಾಥ್‌ರವರು ಅಧ್ಯಕ್ಷರಾಗಿ ಪುನರ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮಂಜುನಾಥ್‌ನವರು ೩೬ ಮತಗಳನ್ನು ಪಡೆದು ಜಯಶೀಲರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಮತ್ತೆ ಅಧ್ಯಕ್ಷರಾಗಿ ಪುನರ್ ಆಯ್ಕೆಯಾದರು. ಎದುರಾಳಿ ಸ್ಪರ್ಧಿ ಎಂ.ಕೆ.ನಾಚಪ್ಪನವರು ೨೯ ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷರಾಗಿ ಕೆ.ಪಿ.ಗಣೇಶ್ ಆಯ್ಕೆಯಾದರು. ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಟಿ.ಎಲ್.ಅನಿತಾ ಅವರು ೩೩ ಮತಗಳನ್ನು ಪಡೆದು ವಿಜಯಶಾಲಿಯಾದರೆ, ಆನಂದ ಜಾಧವ್‌ರವರು ೩೧ ಮತಗಳು ಪಡೆದು ಎರಡು ಮತಗಳ ಅಂತರದಿಂದ ಸೋಲು ಅನುಭವಿಸಿದರು. ಚಾಮರವರು ಖಜಾಂಚಿಯಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಸಮಿತಿಯನ್ನು ಲಿಯಾಫಿಯ ಸರ್ವ ಸದಸ್ಯರು ಹಾಗೂ ಎಲ್‌ಐಸಿ ಅಧಿಕಾರಿಗಳು ಅಭಿನಂದಿಸಿದರು. ಈ ಹಿಂದೆ ಲಿಯಾಫಿ ಸಂಘಟನೆಯ ಮಡಿಕೇರಿ ಘಟಕಕ್ಕೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಸ್ಪರ್ಧಾ ಆಕಾಂಕ್ಷಿಗಳು ಹೆಚ್ಚಿದ ಕಾರಣ ಚುನಾವಣೆ ನಡೆಯಿತು.
ನೂತನ ಸಮಿತಿ ಆಯ್ಕೆಗೂ ಮುನ್ನ ಸಮಿತಿಯ ೨೦೨೨ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ ಮೈಸೂರು ವಿಭಾಗೀಯ ಮಂಡಳಿ ಅಧ್ಯಕ್ಷ ವಿ.ಜಿ.ಅಶೋಕ್, ಕಾರ್ಯದರ್ಶಿ ರಾಜು, ಸಹಕಾರ್ಯದರ್ಶಿ ಶಿವಣ್ಣ ಹಾಗೂ ಖಜಾಂಚಿ ಮಹೇಶ್ ಭಾಗವಹಿಸಿದ್ದರು.