ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ರೋಹಿಣಿ ಅವರನ್ನು ಸದಸ್ಯರು ಅಭಿನಂದಿಸಿದರು. 
ಜಿಲ್ಲೆ

ಗೌಡಳ್ಳಿ ಗ್ರಾಪಂಗೆ ಮಂಜುನಾಥ್ ಅಧ್ಯಕ್ಷ

ಸೋಮವಾರಪೇಟೆ: ಗೌಡಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಸವನಕೊಪ್ಪ ಮಂಜುನಾಥ್, ಉಪಾಧ್ಯಕ್ಷರಾಗಿ ಕೊರ್ಲಳ್ಳಿ ಗ್ರಾಮದ ರೋಹಿಣಿ ಅವಿರೋಧ ಆಯ್ಕೆಯಾದರು.

ಜಿ.ಎಸ್.ನಾಗರಾಜ್, ಜಿ.ಜಿ.ಮಲ್ಲಿಕಾ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಕಚೇರಿಯಲ್ಲಿ ಇತ್ತೀಚೆಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ಮಂಜುನಾಥ್, ರೋಹಿಣಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀದೇವಿ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ಸದಸ್ಯರಾದ ಕೆ.ಕೆ.ಸುಮಾ, ಗೌರಿ, ಜಿ.ಜಿ.ಗಣೇಶ್, ವಿಶಾಲಾಕ್ಷಿ, ನವೀನ್ ಅಜ್ಜಳ್ಳಿ, ಸಿ.ಇ.ವೆಂಕಟೇಶ್, ಪಿಡಿಒ ಲಿಖಿತಾ ಇದ್ದರು.