ನುಗ್ಗೇಹಳ್ಳಿ: ಹೋಬಳಿಯ ತಗಡೂರು ಗೇಟ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಗ್ಗಡಿಗೆರೆ ಗ್ರಾಮದ ಜೆಡಿಎಸ್ ಬೆಂಬಲಿತ ಮಂಜುಳಮ್ಮ ನಿಂಗೇಗೌಡ ಅವಿರೋಧವಾಗಿ ಶುಕ್ರವಾರ ಆಯ್ಕೆಯಾದರು.
ಸಿದ್ದರಹಟ್ಟಿ ಗ್ರಾಮದ ಜಯರಾಮ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ಪಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಮಂಜುಳಮ್ಮ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾ ಅಧಿಕಾರಿ ಸಿಡಿಒ ವಿಜಯೇಂದ್ರ ಅವರು ಅವಿರೋಧ ಆಯ್ಕೆ ಪ್ರಕಟಿಸಿದರು.
ಕಾರ್ಯನಿರ್ವಹಣಾಧಿಕಾರಿ ಗಿರೀಶ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಒಬ್ಬಳಾಪುರ ಎನ್. ಬಸವರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮರಾಜ್, ಕೃಷಿ ಪತ್ತಿನ ಸಂಘದ ಉಪಾಧ್ಯಕ್ಷ ಕೆ.ಸಿ.ಪ್ರತೀಪ್, ಆಡಳಿತ ಮಂಡಳಿ ನಿರ್ದೇಶಕರಾದ ಕಲ್ಲೇ ಸೋಮನಹಳ್ಳಿ (ತಮ್ಮಯ್ಯ) ರಂಗಸ್ವಾಮಿ, ಈರೇಗೌಡ, ಕೆ.ಎಂ.ನಾಗೇಶ್, ತಿಲಾಮಣಿ, ಬಿ. ಎಸ್. ಚಂದ್ರಶೇಖರ್, ಶಂಕರ್, ರಾಜು, ಪ್ರಶಾಂತ್, ಶಶಿಕಲಾ, ಚರಣ್‌ರಾಜ್ ಇತರರು ಹಾಜರಿದ್ದರು.