ಗದಗ:
ಅಂಗವಿಕಲತೆ ಶಾಪವಲ್ಲ. ಅದನ್ನು ತಿಳುವಳಿಕೆ ಮೂಲಕ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿ ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಾಗಿದೆ ಎಂದು ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ ಹೇಳಿದರು.
ಸೋಮವಾರ ನಗರದ ಮಂಜು ಸಂಸ್ಥೆಯ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಾಲೆಯಲ್ಲಿ ಜಿಲ್ಲಾ ಸಮನ್ವಯ ಪ್ರಗತಿ ಪರಿಶೀಲನಾ ಸಭೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಸೌಲಭ್ಯಗಳಿಂದ ವಿಶೇಷ ಚೇತನರು ವಂಚಿತರಾಗದಂತೆ ಮಾಡಬೇಕಾಗಿದೆ. ಪ್ರತಿಯೊಬ್ಬರು ವಿಕಲಚೇತನ ಕಾರ್ಡ್ ಹೊಂದುವಂತೆ ಪ್ರಯತ್ನಿಸಬೇಕು. ಇಲಾಖೆಯಿಂದ ವಿಶೇಷ ಚೇತನರಿಗೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದರು.
ಜಿಲ್ಲಾ ಶಾಲಾ ಶಿಣ ಹಾಗೂ ಸಾರತಾ ಇಲಾಖೆಯ ಅಧಿಕಾರಿ ಎಸ್. ಕೆ. ಹವಾಲ್ದಾರ ಮಾತನಾಡಿ, ವಿಶೇಷ ಚೇತನ ಮಕ್ಕಳ ಸೇವೆ ದೇವರ ಕೆಲಸ. ನಿಸ್ವಾರ್ಥ ಸೇವೆಯಿಂದ ಈ ಕಾರ್ಯ ನಡೆಯುತ್ತದೆ. ಜಿಲ್ಲೆಯಾದ್ಯಂತ ಸಮನ್ವಯ ಶಿಣದ ಮೂಲಕ ವಿಶೇಷ ಚೇತನ ಮಕ್ಕಳು ಸಾಮಾನ್ಯ ಮಕ್ಕಳೊಂದಿಗೆ ಕೊಡಿ ಕಲಿಯುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದರು.
ಅಧ್ಯತೆ ವಹಿಸಿ ಮಾತನಾಡಿದ ಮಂಜು ಶಿಣ ಸಂಸ್ಥೆಯ ಅಧ್ಯ ಶಂಕರಸಿಂಗ ರಜಪೂತ, ವಿಶೇಷ ಚೇತನ ಮಕ್ಕಳ ಸೇವೆಯಲ್ಲಿ ನೆಮ್ಮದಿ ಇದೆ. ಈ ಮಕ್ಕಳ ಶ್ರೇಯೋಭಿವೃದ್ಧಿಯೇ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆಯ ಅಧಿಕಾರಿ ಮಹಾಂತೇಶ ಕುರಿ, ಶಾಲಾ ಶಿಣ ಇಲಾಖೆಯ ಎಸ್.ಕೆ ಹವಾಲ್ದಾರ, ಮಂಜು ಶಿಣ ಸಂಸ್ಥೆಯ ಅಧ್ಯ ಶಂಕರಸಿಂಗ ರಜಪೂತ ಅವರನ್ನು ಸನ್ಮಾನಿಸಲಾಯಿತು.
ವಿರೇಂದ್ರಸಿಂಗ ರಜಪೂತ, ಕೆ. ಎಸ್. ಬೇಲೇರಿ, ಆರ್. ಆರ್. ಹಿರೇಮಠ. ಐ. ಸಿ. ಪಲ್ಲೇದ, ಬಸವರಾಜ ಮಟ್ಟಿ, ಎನ್. ಆರ್. ಸಿನ್ನೂರ ಇದ್ದರು.