ಜಿಲ್ಲೆ

ಮಂಜೇಶ್ವರದಲ್ಲಿ ನಾಗರ ಪಂಚಮಿ ಸಂಭ್ರಮ

Mangaluru - Prakash MC Manjeshwar

ಮಂಜೇಶ್ವರ : ಹದಿನೆಂಟು ಪೇಟೆಯ ದೇವಳ ವೆಂಬ ಖ್ಯಾತಿಯ ಶ್ರೀಮದ್ ಅನಂತೇಶ್ವರ ದೇವಸ್ಥಾನದಲ್ಲಿ " ನಾಗರ ಪಂಚಮಿ" ಪ್ರಯುಕ್ತ ಸೋಮವಾರ ಸಹಸ್ರಾರು ಭಕ್ತರು ಶ್ರದ್ದಾ ಭಕ್ತಿಯಿಂದ ಶ್ರೀ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು . ಶ್ರೀದೇವಳ ದಲ್ಲಿ ಪ್ರಾತಃಕಾಲದಿಂದ ಸಾಗರೋಪ ಸಾಗರ ಭಗವತ್ ಭಕ್ತರು ನಾಗರ ಪಂಚಮಿ ಪ್ರಯುಕ್ತ ಶ್ರೀ ದೇವರಿಗೆ ವಾಸುಕೀ ಪೂಜೆ , ನಾಗ ಪೂಜೆ , ಪಂಚಾಮೃತ ಅಭಿಷೇಕ , ಕ್ಷೀರಾಭಿಷೇಕ , ಶಿಯಾಲ ಅಭಿಷೇಕಗಳು ನಡೆದವು . ದೇಶ ವಿದೇಶಗಳಿಂದ ಭಜಕರು ಆಗಮಿಸಿದ್ದು , ಶ್ರೀ ದೇವಳದಲ್ಲಿ ಇಂದು ವಿಶೇಷ ಅಲಂಕಾರ , ಪೂಜೆ ಪುರಸ್ಕಾರಗಳು ನಡೆದವು , ಮಧ್ಯಾನಃ ಪೂಜೇಬಳಿಕ ಸಮಾರಾಧನೆ ನೆರವೇರಿತು .