ಜಿಲ್ಲೆ

ಜೀವಕ್ಕೆ ಮಾರಕವಾದ ಮಾಂಜಾದಾರವನ್ನು ಮಾರುವ ಅಂಗಡಿಗಳ ಮೇಲೆ ಪೊಲೀಸ್ ದಾಳಿ

Gadag - Shivanand Hiremath

ಗದಗ: ಗಾಳಿಪಟ ಹಾರಿಸಿ ಅಜಾಗೂರಕತೆಯಿಂದ ಬಿಟ್ಟು ಹೋಗುವ ಮಾಂಜಾದಾರದಿಂದಾಗಿ ರಸ್ತೆಯಲ್ಲಿ ನಡೆದಾಡುವ ಮತ್ತು ಬೈಕ್ ಸವಾರರು ಜೀವ ಹಾನಿಯಾಗುವಂತ ಘಟನೆಗಳು ಸಂಭವಿಸುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ, ಮಂಗಳವಾರ ರಂದು ಪೆÇಲೀಸ್ ಉಪ-ಅಧೀಕ್ಷಕರಾದ ಜೆ ಎಚ್ ಇನಾಮದಾರ್  ರವರ ಮಾರ್ಗದರ್ಶನದಲ್ಲಿ ಗದಗ ಶಹರ ಚವಡಿ ಕೂಟ ಹತ್ತಿರ ಇರುವ ನ್ಯೂ ಫ್ಯಾನ್ಸಿ ಸ್ಟೋರ್ ಶಂಕರ ಗಂಗಾಸಾ ಮಲಜೀ, ದತ್ತು ಸ್ಟೋರ್ ಸರಸ್ವತಿ ದತ್ತುಸಾ ಮೇರವಾಡೆ. ಜವಹಾರ ಹನುಮಂತಸಾ ಮೇರವಾಡೆ, ರವರಗಳ ಅಂಗಡಿಗೆ ದಾಳಿ ಮಾಡಿ ಸುಮಾರು 50 ಬಂಡಲ್ ಮಾಂಜಾದಾರ, ಪ್ಲಾಸ್ಟಿಕ್ ದಾರವನ್ನು ವಶಪಡಿಸಿಕೊಂಡು ಅವರಿಗೆ ಮುಂದೆ ಈ ತರಹದ ಪ್ರಾಣ ಹಾನಿಯಾಗುವ ಯಾವುದೇ ದಾರಗಳನ್ನು ಮಾರಿದ್ದಲ್ಲಿ ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಅಂತಾ ಎಚ್ಚರಿಕೆ ನೀಡಲಾಯಿತು.
ಪಿಐ ಡಿ ಬಿ ಪಾಟೀಲ್,  ಪಿ.ಎಸ್.ಐ ಎಚ್ ಕೆ ಪಾಟೀಲ್,ಎನ್ ಜಿ ಭರಮಗೌಡರ, ಎಚ್ ಐ ಯಡಿಯಾಪೂರ, ಎಮ್ ಬಿ ವಡ್ಡಟ್ಟಿ, ಎಮ್ ಡಿ ಕವಡಕಿ, ಎ ಆರ್ ಕವಲೂರ, ಹನುಮಂತ ಮಡ್ಡಿ. ಹಾಜರಿದ್ದರು.