ಜಿಲ್ಲೆ

ಮಣಿಪುರ ಘಟನೆ ಖಂಡಿಸಿ ಚಿಂಚೋಳಿಯಲ್ಲಿ ಪ್ರತಿಭಟನೆ

ಬಾಬುರಾವ ಯಡ್ರಾಮಿ

ಸಮುದಾಯಗಳ ಮೇಲೆ ನಿರಂತರ ಶೋಷಣೆಗೆ ಆಕ್ರೋಶ
ವಿಜಯವಾಣಿ ಸುದ್ದಿಜಾಲ ಚಿಂಚೋಳಿ (ಕಲಬುರಗಿ)
ಮಣಿಪುರದಲ್ಲಿ ಬುಡಕಟ್ಟು ಸಮುದಾಯವನ್ನು ಗುರಿಯಾಗಿಸಿ ಶೋಷಣೆ ನಡೆಯುತ್ತಿರುವುದು ಅಸಂವಿಧಾನಿಕ ಎಂದು ಭಾರತ ಮುಕ್ತಿ ಮೋರ್ಚಾ ರಾಜ್ಯ ಸಂಚಾಲಕ ಮಾರುತಿ ಗಂಜಗೇರ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಬಸ್ ಡಿಪೊ ಕ್ರಾಸ್ ವರೆಗೆ  ಬೃಹತ್  ಮೆರವಣಿಗೆ ನಡೆಸಿ ತಹಸೀಲ್ದಾರ್‌ರ ಮೂಲಕ ರಾಷ್ಟçಪತಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಾತನಾಡಿದ ಅವರು, ಕೂಡಲೇ ಮಣಿಪುರÀ ಅತ್ಯಾಚಾರ, ಇತರೆ ಗಲಭೆಗೆ ಕಾರಣರಾದ ಕಿಡಿಗೇಡಿಗಳನ್ನು ದೇಶದಿಂದ ಗಡಿಪಾರು ಮಾಡಿ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಚಿಂಚೋಳಿ ತಾಲೂಕಿನಲ್ಲಿ ಪದೇಪದೆ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಪ್ರಕರಣ ಮರುಕಳಿಸುತ್ತಿದ್ದು ,ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕೂಡಲೇ ಸಂಬAಧಪಟ್ಟ ಇಲಾಖೆ ಜಾಗ್ರತಿ ಮೂಡಿಸಿ ವಿದ್ಯಾರ್ಥಿ ಮತ್ತು ಪಾಲಕರಿಗೆ ಆತ್ಮಸ್ಥೆÊರ್ಯ ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು.
ಗೋಪಾಲರಾವ್ ಕಟ್ಟಿಮನಿ, ಚಂದ್ರಕಾAತ, ಜಗನ್ನಾಥ ಕಟ್ಟಿ, ಮಾರುತಿ ಜಾಧವ್, ಶಾಮರಾವ, ಗೋಪಾಲ ಪೂಜಾರಿ, ವಿಜಯಕುಮಾರ ಘಾಟಗೆ, ರೇವಣಸಿದ್ದಪ್ಪ ಸುಬೇದಾರ್, ಮೋಹನ ಐನಾಪುರ, ನರಸಪ್ಪ ಕೀವಡನುರ, ಹಫೀಜ್ ಸರ್ದಾರ್, ಸಂದೀಪ್ ದೇಗಲ್ಮಡಿ,ವೀರೇಶ ಹೊಸಮನಿ, ಪ್ರದೀಪ್ ಮೇತ್ರಿ,ಸುರೇಶ್ ಬಳಂಕರ್, ಮೌನೇಶ್ ಗಾರಂಪಳ್ಳಿ, ನಾಗು ಕಟ್ಟಿ, ಹರ್ಷವರ್ಧನ್ ಚಿಮ್ಮನಕಟ್ಟಿ,ರಮೇಶ ಭಂಗೆ , ಸುರೇಶ್ ನಿರ್ಣಾ, ಪ್ರಭಾಕರ ಪಾಸ್ಟರ,ಸತೀಶï ಹೋಸಳ್ಳಿಪಾಸ್ಟರ, ರಾಬರ್ಟ್, ಶಿವುಕುಮಾರ ಕಟ್ಟಿಮನಿ ಇತರರಿದ್ದರು.