ಜಿಲ್ಲೆ

ಮಾನಿನಿ ಸಂಗೀತ ಸಂಭ್ರಮ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಹಿಳಾ ದಿನ ನಿಮಿತ್ತ ಸರಸ್ವತಿ ಸಂಗೀತ ವಿದ್ಯಾಲಯ ಹಾಗೂ ಅಭಿಜ್ಞಾ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಏ. 27ರಂದು ಆಲೂರು ವೆಂಕಟರಾವ್​ ಭವನದಲ್ಲಿ ಮಾನಿನಿ ಸಂಗೀತ ಸಂಭ್ರಮ ಹಾಗೂ ಮಹನೀಯರ ಸನ್ಮಾನ ಸಮಾರಂಭ ಏರ್ಪಡಿಸಲಾಗಿದೆ ಎಂದು ಆಯೋಜಿಕಿ ವಿದುಷಿ ರಾಧಾ ದೇಸಾಯಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಸ್ವರ್ಣ ಸಮೂಹ ಸಂಸ್ಥೆ ಎಂಡಿ ಡಾ. ವಿ.ಎಸ್​.ವಿ ಪ್ರಸಾದ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ವೈದ್ಯೆ ಡಾ. ಸೌಭಾಗ್ಯ ಕುಲಕರ್ಣಿ, ಸವಿತಾ ಅಮರಶೆಟ್ಟಿ ಆಗಮಿಸುವರು. ಭಾರತಿದೇವಿ ರಾಜಗುರು ಅಧ್ಯಕ್ಷತೆ ವಹಿಸುವರು ಎಂದರು.

ಸ್ಥಳಿಯ ಮಹಿಳಾ ಗಾಯಕರು ಗಾಯನ ಪ್ರಸ್ತುತಪಡಿಲಿದ್ದು, ಮಹಿಳೆಯರೇ ಸಹ ಕಲಾವಿದರಾಗಿ ಭಾಗವಹಿಸುತ್ತಿರುವುದು ಕಾರ್ಯಕ್ರಮದ ವಿಶೇಷ. ಸ್ಥಳಿಯ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ಸಿಗಲಿ ಎಂಬ ಕಾರಣಕ್ಕೆ ಇಂತಹ ವಿನೂತನ ಕಾರ್ಯ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ವರ್ಷವೂ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ ಎಂದರು.

ವಿದುಷಿ ಸುಜಾತಾ ಗುರವ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ 25 ಹಿರಿಯ ಕಲಾವಿದರನ್ನು ಸನ್ಮಾನಿಸಲಾಗುವುದು. ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಕುಮಾರ ಬೆಕ್ಕೇರಿ, ಡಾ. ಶಶಿಧರ ನರೇಂದ್ರ, ವೀರಣ್ಣ ಪತ್ತಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಡಾ. ಶಕ್ತಿ ಪಾಟೀಲ, ಆರತಿ ಪಾಟೀಲ, ಇತರರು ಇದ್ದರು.