ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ 48 ದಿನಗಳ ಕಾಲ ನಡೆಯಲಿರುವ ಸಾಮೂಹಿಕ ಲಕ್ಷ್ಮೀ ಪೂಜೆಯ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಜೀವ ಮಠಂದೂರು, ಮೋನಪ್ಪ ಭಂಡಾರಿ, ಗೋವಿಂದ ರಾಜ್‌ ಇದ್ದರು.  
ಜಿಲ್ಲೆ

ಧನಾತ್ಮಕತೆಯಿಂದ ಜೀವನದಲ್ಲಿ ಏಳಿಗೆ MANIL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ
  • ಸಾಮೂಹಿಕ ಲಕ್ಷ್ಮೀ ಪೂಜೆಗೆ ಚಾಲನೆ
ವಿಟ್ಲ: ಭಗವಂತನ ಸ್ಮರಣೆ ನಿರಂತರವಾಗಿ ನಡೆಸುವ ಮೂಲಕ ಪರಿಶುದ್ಧ ಮನಸ್ಸಿನಿಂದ ಇರಬೇಕು. ಬಾಲಭೋಜನದಿಂದ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗುತ್ತಿದೆ. ಭಕ್ತಿ ಮಾರ್ಗದ ಮೂಲಕ ಸಾಗಿದಾಗ ಯಶಸ್ಸಿನೆಡೆಗೆ ಹೋಗಬಹುದು. ಧನಾತ್ಮಕ ಯೋಚನೆಯಿಂದ ಮುನ್ನಡೆದಾಗ ಜೀವದಲ್ಲಿ ಮೇಲೆ ಬರಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ 48 ದಿನಗಳ ಕಾಲ ನಡೆಯಲಿರುವ ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆಯಿತ್ತು ಆಶೀರ್ವಚನ ನೀಡಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ದುರ್ಗಾಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮೋನಪ್ಪ ಭಂಡಾರಿ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಉದ್ಯಮಿಗಳಾದ ಸೀತಾರಾಮ ರೈ ಕೆದಂಬಾಡಿಗುತ್ತು, ಗೋವಿಂದ ರಾಜ್‌ ಹೊಸಕೋಟೆ, ದಾಮೋದರ ಬಿ. ಎಂ., ನಾರಾಯಣ ಭಟ್‌, ಟ್ರಸ್ಟಿ ಚಂದ್ರಶೇಖರ ಮೂಲ್ಯ, ಸಮಿತಿಯ ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಅರ್ಚಕ ಗಣಪತಿ ಭಟ್‌ ಬಾಕಿಲಪದವು ಉಪಸ್ಥಿತರಿದ್ದರು.
ಸೋಮಪ್ಪ ಪೂಜಾರಿ ಸ್ವಾಗತಿಸಿದರು. ಸತೀಶ್‌ ಕುಮಾರ್‌ ಕಾಪು ವಂದಿಸಿದರು. ಎಚ್‌.ಕೆ. ನಯನಾಡು ಕಾರ್ಯಕ್ರಮ ನಿರುಪಿಸಿದರು.

ಕನಕಧಾರಾ ಯಾಗ

ಬೆಳಗ್ಗೆ ನಾಗದೇವರ ಪೂಜೆ, ಗೋಪೂಜೆ, ಬಾಲಭೋಜನ, ಸಾಮೂಹಿಕ ಕುಂಕುಮಾರ್ಚನೆ, ಮಹಾಪೂಜೆ, ವಾಯನದಾನ, ಸಾಮೂಹಿಕ ಲಕ್ಷ್ಮೀ ಪೂಜೆ ನಡೆಯಿತು. ವಿಶೇಷವಾಗಿ ಶ್ರೀಗಳ ಮಾರ್ಗದರ್ಶನದಲ್ಲಿ ಕನಕಧಾರಾ ಯಾಗ ಸಂಪನ್ನಗೊಂಡಿತು.