ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ವರಮಹಾಲಕ್ಷ್ಮೀ ವ್ರತಾಚರಣೆಯ ಆಮಂತ್ರಣ ಪತ್ರವನ್ನು ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಬಿಡುಗಡೆ ಮಾಡಿದರು. ಡಾ.ಹರೀಶ್‌ ಬೊಟ್ಟಾರಿ ಚೆವಾರು, ಗೋಪಾಲಕೃಷ್ಣ ಪೈ, ಅಮರನಾಥ ಅಜಿಲ ಆರಿಕಲ್ಲು, ಸತೀಶ್‌ ಚಂದ್ರ ಭಂಡಾರಿ, ಹರಿಪ್ರಸಾದ್‌ ಶೆಟ್ಟಿ ಮೇಲೇಂಗಿ ಉಪಸ್ಥಿತರಿದ್ದರು.  
ಜಿಲ್ಲೆ

ಜೀವನದಲ್ಲಿ ಗುರು-ಗುರಿ ಮುಖ್ಯ MANILA

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಮಾಣಿಲ ಶ್ರೀ ಆಶೀರ್ವಚನ
  • ವರಮಹಾಲಕ್ಷ್ಮೀ ವ್ರತಾಚರಣೆ ಆಮಂತ್ರಣ ಬಿಡುಗಡೆ
ವಿಟ್ಲ: ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಗುರು ಮತ್ತು ಗುರಿ ಜೀವನದಲ್ಲಿ ಬಹಳ ಮುಖ್ಯ. ಮನಸ್ಸು, ಭಾವ, ಕರ್ಮ ಉತ್ತಮವಾಗಿದ್ದಾಗ ಎಲ್ಲವನ್ನೂ ಪಡೆಯಬಹುದು. ಸ್ಥಿತಿಗಳು ಆಗಾಗ ಬದಲಾಗುತ್ತವೆ, ಅದಕ್ಕೆ ಹೊಂದಿಕೊಳ್ಳಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ 27ನೇ ವರ್ಷದ 48 ದಿನಗಳ ಕಾಲ ನಡೆಯುವ ವರಮಹಾಲಕ್ಷ್ಮೀ ವ್ರತಾಚರಣೆಯ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಸಮಿತಿ ಅಧ್ಯಕ್ಷ ಡಾ.ಹರೀಶ್‌ ಬೊಟ್ಟಾರಿ ಚೆವಾರು, ಉದ್ಯಮಿ ಗೋಪಾಲಕೃಷ್ಣ ಪೈ, ಕಾರಳಮುಗೇರುಗುತ್ತು ಅಮರನಾಥ ಅಜಿಲ ಆರಿಕಲ್ಲು, ಕ್ಯಾಂಪ್ಕೊ ನಿರ್ದೇಶಕ ಸತೀಶ್‌ ಚಂದ್ರ ಭಂಡಾರಿ, ಕಾಟುಕುಕ್ಕೆ ಮುಖ್ಯ ಶಿಕ್ಷಕ ಹರಿಪ್ರಸಾದ್‌ ಶೆಟ್ಟಿ ಮೇಲೇಂಗಿ, ಕಲ್ಯಟೆ ವೆಂಕಟ್ರಮಣ ಭಟ್‌, ಕ್ಷೇತ್ರದ ಟ್ರಸ್ಟಿ ಚಂದ್ರಶೇಖರ ಮೂಲ್ಯ, ಮಹಿಳಾ ಸಮಿತಿಯ ರೇವತಿ ಪೆರ್ನೆ ಮತ್ತಿತರರು ಉಪಸ್ಥಿತರಿದ್ದರು.

ಕೆಯ್ಯೂರು ನಾರಾಯಣ ಭಟ್‌ ಸ್ವಾಗತಿಸಿದರು. ದೇವಪ್ಪ ಕುಲಾಲ್‌ ಪಂಜಿಕಲ್ಲು ವಂದಿಸಿದರು. ಎಚ್‌.ಕೆ.ನಯನಾಡು ನಿರೂಪಿಸಿದರು.

"

ಸಮಾಜದ ಮನೆತನಗಳ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಜನ್ಮಾಂತದ ಪಾಪವನ್ನು ಕಳೆಯುವ ಕೆಲಸವಾಗಬೇಕು. ಸಮಾಜದಲ್ಲಿ ಸಂತ ನಿರ್ಲಿಪ್ತತೆಯಲ್ಲಿ ಇರುವ ಕಾರ್ಯವಾಗಬೇಕು. ಪ್ರತಿಯೊಬ್ಬರ ಶರಣಾಗತಿಯ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ.ಅಂತರ್ಗತವಾದ ಪ್ರಾರ್ಥನೆ ಭಗವಂತನಿಗೆ ಹತ್ತಿರವಾಗಿದೆ. ಭಕ್ತಿಯಿದ್ದಾಗ ಶಕ್ತಿಯನ್ನು ಅರಿಯಲು ಸಾಧ್ಯ.

— ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ