ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಸಾಮೂಹಿಕ ಲಕ್ಷ್ಮೀ ಪೂಜೆಯಲ್ಲಿ ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. 
ಜಿಲ್ಲೆ

ಅಮೃತತ್ವ ಸ್ವೀಕರಿಸುವ ಗುಣ ಬೆಳೆಯಲಿ MANILA

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ
  • ಸಾಮೂಹಿಕ ಲಕ್ಷ್ಮೀ ಪೂಜೆ
ವಿಟ್ಲ: ಅಮೃತತ್ವವನ್ನು ಸ್ವೀಕಾರ ಮಾಡುವ ಗುಣ ಬೆಳೆಯಬೇಕು. ಭಗವಂತನ ಇರುವಿಕೆಯ ದೃಢತೆಯಲ್ಲಿ ನಂಬಿಕೆಾುದ್ದಾಗ ಏಳಿಗೆಯನ್ನು ಕಾಣಬಹುದು. ಧನಾತ್ಮಕವಾಗಿ ಯೋಚಿಸುವ ಕಾರ್ಯ ಪ್ರತಿಾೂಬ್ಬರಿಂದ ನಡೆಯಬೇಕು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಮಾಜಕ್ಕೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ 48ದಿನಗಳ ಕಾಲ ನಡೆಯುವ ಸಾಮೂಹಿಕ ಲಕ್ಷ್ಮೀ ಪೂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಂಸ್ಕಾರ ಭಾರತಿ ಕರ್ನಾಟಕ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಚೆನ್ನಯ್ಯ ಸ್ವಾಮಿ, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿ, ವ್ರತಾಚರಣೆ ಸಮಿತಿ ಅಧ್ಯಕ್ಷ ಹರೀಶ್‌ ಬೊಟ್ಟಾರಿ ಚೇವಾರು, ಶಿಕ್ಷಕರಾದ ದಾಮೋದರ, ಲತಾ, ವ್ರತಾಚರಣೆ ಸಮಿತಿ ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಗೌರವಾಧ್ಯಕ್ಷ ಕಲ್ಯಾಟೆ ವೆಂಕಟ್ರಮಣ ಭಟ್‌ ಉಪಸ್ಥಿತರಿದ್ದರು.
ವ್ರತಾಚರಣೆ ಸಮಿತಿ ಗೌರವಾಧ್ಯಕ್ಷ ನಾರಾಯಣ ಭಟ್‌ ಸ್ವಾಗತಿಸಿದರು. ರಾಮಕೃಷ್ಣ ಎರುಂಬು ವಂದಿಸಿದರು. ಸೋಮಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
"

ಆಹಾರ ವಿಷಮಯವಾಗಿ, ಅದರ ಪರಿಣಾಮ ಮನುಷ್ಯನ ಮೇಲೆ ಆಗುತ್ತಿದೆ. ವಿದ್ಯಾವಂತರು ಸಮಾಜಕ್ಕೆ ಕೊಡುಗೆಯಾಗಬೇಕು ಹೊರತು ಮಾರಕವಾಗಬಾರದು. ಮಕ್ಕಳು ದುಶ್ಚಟಕ್ಕೆ ಬಲಿಯಾಗದಂತೆ, ಮತಾಂತರಕ್ಕೆ ಬಲಿಯಾಗದೆ ಕ್ಷೇತ್ರ ಅಭಯ ನೀಡಲಿದೆ.

— ಶ್ರೀ ಮೋಹನದಾಸ ಸ್ವಾಮೀಜಿ, ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ