ಶ್ರೀ ಕ್ಷೇತ್ರ ಮಾಣಿದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ಚಂಡಿಕಾ ಹೋಮದ ಪೂರ್ಣಾಹುತಿನಡೆಯಿತು. 
ಜಿಲ್ಲೆ

ಧನಾತ್ಮಕ ಚಿಂತನೆಯಿಂದ ಸಮಾಜಕ್ಕೆ ಒಳಿತು MANILA

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಮಾಣಿಲ ಶ್ರೀ ಆಶೀರ್ವಚನ
  • ಶ್ರೀಧಾಮದಲ್ಲಿ ಮಹಾಲಕ್ಷ್ಮೀ, ಗಣಪತಿ ಪೂಜೆ
ವಿಟ್ಲ: ಮಕ್ಕಳು ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲರೂ ಸಕಾರಾತ್ಮಕ ಚಿಂತನೆ ಮಾಡುವ ಮೂಲಕ ಸಮಾಜದ ಹಿತವನ್ನು ಕಾಪಾಡಬೇಕಾಗಿದೆ. ಲೋಕ ಕಲ್ಯಾಣಾರ್ಥವಾಗಿ ಶ್ರೀ ಧಾಮದಲ್ಲಿ ನಿತ್ಯ ಹೋಮ ಹವನಾದಿಗಳನ್ನು ನಡೆಸಲಾಗುತ್ತಿದೆ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಮಾಣಿಲ ಶ್ರೀಧಾಮದಲ್ಲಿ ನಡೆಯಲಿರುವ ಶ್ರೀ ವರಮಹಾಲಕ್ಷ್ಮೀ ವ್ರತಾಚಾರಣೆ ಕಾರ್ಯಕ್ರಮದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರೀ ದೇವಿಗೆ ಪೂಜೆ, ಶ್ರೀ ಮಹಾಲಕ್ಷ್ಮೀ, ಗಣಪತಿ ಪೂಜೆ ಬಳಿಕ ಆಶೀರ್ವಚನ ನೀಡಿದರು.
ಬಾಲ ಭೋಜನ, ನಾಗನಿಗೆ ಪಂಚಾಮೃತಾಭಿಷೇಕ, ದೈವಗಳಿಗೆ ತಂಬಿಲ ಸೇವೆ, ಚಂಡಿಕಾ ಹೋಮದ ಪೂರ್ಣಾಹುತಿ, ಶ್ರೀ ವರಮಹಾಲಕ್ಷ್ಮೀ ಸನ್ನಿಧಿಯಲ್ಲಿ ಕುಂಕುಮಾರ್ಚನೆ, ವಾಯನ ದಾನ, ಮಧ್ಯಾಹ್ನ ಶ್ರೀ ಲಕ್ಷ್ಮೀಪೂಜೆ, ದುರ್ಗಾಮಹಾಲಕ್ಷ್ಮೀಗೆ ಮಹಾಪೂಜೆ ನೆರವೇರಿತು.
ಅನಸೂಯಾ ಪೈ ಮಂಗಳೂರು, ಟ್ರಸ್ಟಿ ಚಂದ್ರಶೇಖರ ಮೂಲ್ಯ, ಡೋಂಬಯ್ಯ ಮೂಲ್ಯ ಪೆರ್ನೆ, ಟ್ರಸ್ಟಿ ವನಿತಾ ವಿ.ಶೆಟ್ಟಿ ಸುಣ್ಣಂಬಳ, ಬಾಲಕೃಷ್ಣ ರೈ ಕೆಳಗಿನಮನೆ, ಚೆನ್ನಪ್ಪ ಮೂಲ್ಯ ಎರುಗಲ್ಲು, ರಾಜೇಶ್‌ ಕೆ.ಪಿ., ಸೋಮಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.