ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಸಾಮೂಹಿಕ ಲಕ್ಷ್ಮೀ ಪೂಜೆಯ ಚಂಡಿಕಾ ಹವನದ ಪೂರ್ಣಾಹುತಿ ನಡೆಯಿತು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ರಾಮ ಪ್ರಸಾದ್ ನಲ್ಲೂರಾಯ, ವೇದವ್ಯಾಸ ರಾಮಕುಂಜ, ಮುರುವ ನಡುಮನೆ ಮಹಾಬಲ ಭಟ್ ಇದ್ದರು. 
ಜಿಲ್ಲೆ

ಹಿರಿಯರ ನಡೆನುಡಿ ಕಿರಿಯರಿಗೆ ಆದರ್ಶವಾಗಲಿ MANILA

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶಯ
  • ಸಾಮೂಹಿಕ ಲಕ್ಷ್ಮೀ ಪೂಜೆ
ವಿಟ್ಲ: ಮನಸ್ಸಿನ ವೈಪರೀತ್ಯದಿಂದ ಜಗತ್ತು ತಲ್ಲಣವಾಗುತ್ತಿದೆ. ಶಿಷ್ಟಾಚಾರ ಹಾಗೂ ಬದ್ಧತೆ ಮನುಷ್ಯನಿಗೆ ಶಕ್ತಿಯನ್ನು ತುಂಬುತ್ತದೆ. ಹಿರಿಯರ ನಡೆನುಡಿಗಳು ಮುಂದಿನ ಜನಾಂಗಕ್ಕೆ ಮಾರ್ಗದರ್ಶನವಾಗಬೇಕು. ಬಾಲ ಭೋಜನದ ಮೂಲಕ ಸಮಾಜಕ್ಕೆ ಸಂದೇಶ ಸಾರುವ ಕಾರ್ಯವಾಗಬೇಕು. ಆದರ್ಶಗಳು ಕಣ್ಮರೆಯಾಗುತ್ತಿದ್ದು, ದೇಶದ ಪರಂಪರೆ, ಸಂಸ್ಕೃತಿಯನ್ನು ಅರಿಯಬೇಕು ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ೪೮ ದಿನಗಳ ಕಾಲ ನಡೆಯುವ ಸಾಮೂಹಿಕ ಲಕ್ಷ್ಮೀ ಪೂಜೆಯ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಧ್ಯಾಹ್ನ ಚಂಡಿಕಾ ಹವನದ ಪೂರ್ಣಾಹುತಿ ನಡೆಯಿತು. ಪೈವಳಿಕೆ ತಂತ್ರಿ ರಾಮ ಪ್ರಸಾದ್ ನಲ್ಲೂರಾಯ, ನಿವೃತ್ತ ಪ್ರಾಂಶುಪಾಲ ವೇದವ್ಯಾಸ ರಾಮಕುಂಜ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ಮುರುವ ನಡುಮನೆ ಮಹಾಬಲ ಭಟ್, ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಜೆ.ಎಸ್.ಸೋಮಶೇಖರ್ ಶೇಣಿ, ಕುಲಾಲ ಸಂಘದ ಅಧ್ಯಕ್ಷ ಬಾಬು ಬಿ.ಕೆ., ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯೆ ಚಂದ್ರಾವತಿ ಶೆಟ್ಟಿ ಎನ್.ಬಾಯಾರು, ನಾಗೇಶ್ ಕೊಡಂದೂರು, ಸೂರಜ್ ರೈ ಕೆಳಗಿನಮನೆ, ರೇವತಿ ಪೆರ್ನೆ, ವಿಠಲ ಶೆಟ್ಟಿ ಸುಣ್ಣಂಬಳ, ಚಂದ್ರಶೇಖರ ಕೆದುಮೂಲೆ, ಶ್ರೀಧರ ಬಾಳೆಕಲ್ಲು ಉಪಸ್ಥಿತರಿದ್ದರು.
ನಾರಾಯಣ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಲ್ಯಾಟೆ ವೆಂಕಟ್ರಮಣ ಭಟ್ ವಂದಿಸಿದರು. ಸತೀಶ್ ಕುಮಾರ್ ಕಾಪು ಕಾರ್ಯಕ್ರಮ ನಿರೂಪಿಸಿದರು.
"

ಸಂಪ್ರದಾಯಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಸ್ವಾವಲಂಬಿ ಜೀವನಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಮಠ ಮಂದಿರಗಳ ಮೂಲಕ ಧಾರ್ಮಿಕ ವಿಚಾರ ಪಸರಿಸುವ ಕಾರ್ಯವಾಗಬೇಕು. ಪ್ರತಿಯೊಬ್ಬರೂ ಮುಖ್ಯಪ್ರಾಣರಾಗುವ ಅಗತ್ಯವಿದೆ.

— ವೇದವ್ಯಾಸ ರಾಮಕುಂಜ, ನಿವೃತ್ತ ಪ್ರಾಂಶುಪಾಲ


"

ವಾತಾವರಣದ ಬದಲಾವಣೆಯನ್ನು, ಕಲ್ಮಶವಾಗುತ್ತಿರುವುದನ್ನು ತಡೆಯುವ ಕಾರ್ಯವಾಗಬೇಕು. ಎಚ್ಚರ ತಪ್ಪುವುದರಿಂದ ಜಗತ್ತಿಗೆ ಅಪಾಯವಾಗುತ್ತಿದೆ. ಆಧ್ಯಾತ್ಮಿಕತೆಯಲ್ಲಿ ಪ್ರತಿಯೊಬ್ಬರು ತೊಡಗಿಕೊಂಡಾಗ ಗುರಿಯ ಕಡೆಗೆ ಸಾಗಲು ಸುಲಭ.

— ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮಾಣಿಲ ಶ್ರೀಧಾಮ