ಹಿಂದುಪರ ಹೋರಾಟಗಾರರ ಹತ್ತಿಕ್ಕಲು ಖರ್ಗೆ ಕುತಂತ್ರಕ್ಕೆ ಕಿಡಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಹಿಂದುಪರ ಸಂಘಟನೆಗಳ ಹೋರಾಟಗಾರರ ಜತೆಗೆ ಹಿಂದುಗಳ ಪರವಾಗಿ ಧ್ವನಿ ಎತ್ತುವ ಮುಖಂಡರನ್ನು ಜೈಲಿಗಟ್ಟಲು ವ್ಯವಸ್ಥಿತವಾಗಿ ಹುನ್ನಾರ ಮಾಡುತ್ತಿದ್ದಾರೆ. ಅದಕ್ಕಾಗಿ ಅಧಿಕಾರ ಹಾಗೂ ಪೊಲೀಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಹಿಂದೂ ಜಾಗೃತಿ ಸೇನೆಯ ಜಿಲ್ಲಾ ಅಧ್ಯಕ್ಷರಾದ ನಾಗರಾಜ ಸ್ವಾದಿ ಆರೋಪಿಸಿದರು.
ಮುಖಂಡರ ಜತೆಗೂಡಿ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಚಿವ ಖರ್ಗೆ ಅವರು ಅಧಿಕಾರವನ್ನು ಪ್ರಗತಿಯ ಕೆಲಸಗಳಿಗೆ ಬಳಸಿಕೊಳ್ಳದೆ, ಇಂತಹ ಕೆಲಸ ಮಾಡಲು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರನ್ನು ಪೊಲೀಸರು ಸಚಿವ ಸೂಚನೆಯಂತೆ ಬಂಧಿಸಿದ್ದಾರೆ ಎಂದು ಹೇಳಿದರು.
ಬಂಧಿತರಾಗಿರುವ ಮಣಿಕಂಠರನ್ನು ತP್ಷÀಣ ಬಿಡುಗಡೆಗೊಳಿಸದೆ ಹೋದರೆ ಕಲಬುರಗಿ ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಲ್ಲೆ ಮತ್ತು ನಗರ ಪೊಲೀಸರು ಸಚಿವ ಖರ್ಗೆ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಹೊರತು ವಿವೇಚನೆ ಉಪಯೋಗಿಸುತ್ತಿಲ್ಲ. ಕಾನೂನು, ನಿಯಮ ಪಾಲನೆ ಮಾಡುತ್ತಿಲ್ಲ. ಸಕಾರಣವಿಲ್ಲದೆ ಮಣಿಕಂಠರನ್ನು ಬಂಧಿಸಿದ್ದನ್ನು ಖಂಡಿಸಿದರು.
ವಾರದೊಳಗೆ ಮಣಿಕಂಠÀರನ್ನು ಬಿಡುಗಡೆ ಮಾಡದೆ ಹೋದರೆ ಮುಂದಿನ ವಾರ ಹಿಂದೂ ಜಾಗೃತಿ ಸೇನೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಸಹಕಾರದೊಂದಿಗೆ ಕಲಬುರಗಿ ಬಂದ್ ಆಚರಿಸಲಾಗುವುದು ಎಂದು ಹೇಳಿದರು. ಅಲ್ಲದೆ ಬಂಧನದಲ್ಲಿದ್ದಾಗ ರಾಠೋಡ ಮೇಲೆ ಪೊಲೀಸರು ದೌರ್ಜನ್ಯ ನಡೆಸಿ, ಕಿರುಕುಳ ನೀಡಿದ್ದಾರೆ. ಮೇಲಿಂದ ಮೇಲೆ ಪೊಲೀಸರು ಅವರನ್ನು ಬಂಧಿಸುತ್ತಿರುವುದು ನೋಡಿದಾಗ ಅವರ ಜೀವಕ್ಕೆ ಆಪತ್ತಿದೆ ಎಂಬ ಆತಂಕವನ್ನು ಸ್ವಾದಿ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಕಾಂತ ದೀಕ್ಷಿತ, ಶಂಕರ ಚೋಕಾ,ಸುನೀಲ ರಾಠೋಡ, ಸಂತೋಷ ಸೋನಾವಣೆ, ದಶರಥ ಇಂಗೋಳಿ ಇತರಿದ್ದರು.
------