ಬೆಂಗಳೂರು: ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಮೇ 21ರಿಂದ ಮಾವು ಮತ್ತು ಹಲಸು ಮೇಳ ಆಯೋಜಿಸಲಾಗುತ್ತಿದ್ದು, ಶೇ.5 ರಿಂದ 10 ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟ ಮಾಡಲಾಗುವುದು.
ಮೇಳದ ಬಾದಾಮಿ, ರಸಪುರಿ, ತೋತಾಪುರಿ, ಮಲಗೋವ, ಬಂಗನಪಲ್ಲಿಘಿ, ದಶೇರಿ, ಕೇಸರ್, ಮಲ್ಲಿಕಾ, ಕಾಲಪಾಡ್, ಸಕ್ಕರೆಗುತ್ತಿ, ಸೇಂದೂರಾ ಸೇರಿ ವಿವಿಧ ತಳಿಯ ಮಾವಿನ ಹಣ್ಣುಗಳು ಹಾಗೂ ರುಚಿಕರ ಹಲಸಿನ ಹಣ್ಣು ಸಿಗಲಿವೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆದ ಮಾವಿನ ಹಣ್ಣುಗಳನ್ನು ಮತ್ತು ಮಾವಿನ ಕಾಯಿಗಳನ್ನು ಮೇಳದಲ್ಲಿ ಮಾರಾಟ ಮಾಡಲಾಗುವುದು.
ನಗರದ ಹಡ್ಸನ್ ವೃತ್ತದಲ್ಲಿರುವ ಹಾಪ್‌ಕಾಮ್ಸ್ ಮಳಿಗೆಯಲ್ಲಿ ಮೇ 21ರ ಮಧ್ಯಾಹ್ನ 12 ಗಂಟೆಗೆ ಮೇಳ ಉದ್ಘಾಟನೆಯಾಗಲಿದ್ದು, ಮೇ ಅಂತ್ಯದವರೆಗೆ ನಡೆಯಲಿದೆ. ಮೇಳದಲ್ಲಿ ರಾಸಯನಿಕ ಮುಕ್ತ ಹಣ್ಣುಗಳ ಮಾರಾಟ ಮಾಡಲಾಗುವುದು. ರೈತರಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ಒದಗಿಸಲಾಗುವುದು. ಹೀಗಾಗಿ ಹಾಪ್‌ಕಾಮ್ಸ್ ಮಳಿಗೆಗಳಿಗೆ ಭೇಟಿ ನೀಡಿ ಖರೀದಿಸುವ ಮೂಲಕ ಮಾವು ಬೆಳೆಗಾರರನ್ನು ಪ್ರೋತ್ಸಾಹಿಸಬೇಕು ಎಂದು ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮಿರ್ಜಿ ಉಮೇಶ ಶಂಕರ ಕೋರಿದ್ದಾರೆ.