ಸಂಡೂರಿನ ನಾರಿಹಳ್ಳ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಮ್ಯಾಂಗನೀಸ್ ಶಿಲಾಶಾಸನ ಪತ್ತೆ ಮಾಡಲಾಗಿದೆ. ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯರಾದ ಪ್ರೊ.ತಿಪ್ಪೇಸ್ವಾಮಿ, ಡಾ.ಗೋವಿಂದ, ಡಾ.ಕೃಷ್ಣೇಗೌಡ, ಡಾ.ನರಸಿಂಹ, ಡಾ.ವೀರಾಂಜನಯ್ಯ, ಅರ್ಚಕ ಎಂ.ಎನ್.ವೀರಯ್ಯಸ್ವಾಮಿ ಇದ್ದಾರೆ. 
ಜಿಲ್ಲೆ

ಮ್ಯಾಂಗನೀಸ್ ಶಿಲಾಶಾಸನ ಪತ್ತೆ

ಗಾಯತ್ರಿ ಮಾಲಿಪಾಟೀಲ್

ಸಂಡೂರು: ನಾರಿಹಳ್ಳ ಜಲಾಶಯದ ಹಿನ್ನೀರು ಪ್ರದೇಶದ ಶ್ರೀ ಗಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಹಂಪಿ ವಿರೂಪಾಕ್ಷ, ವಿಷ್ಣು ದೇವರ ಆರಾಧನೆ ಉಲ್ಲೇಖಿಸುವ ಮ್ಯಾಂಗನೀಸ್ ಶಿಲಾಶಾಸನ ಪತ್ತೆಯಾಗಿದೆ.

ಈ ಶಾಸನದ ಎಡಕ್ಕೆ ಸೂರ್ಯ, ಬಲಕ್ಕೆ ಚಂದ್ರ ಹಾಗೂ ಮಧ್ಯದಲ್ಲಿ ಶಿವಲಿಂಗ ಚಿತ್ರಗಳಿವೆ. ಬಲಬದಿ ಚಂದ್ರನ ಪಕ್ಕದಲ್ಲಿ ನಕ್ಷತ್ರ ಕೆತ್ತಲಾಗಿದೆ. ಶಾಸನದಲ್ಲಿ ಕಾಲಾವಧಿ ಉಲ್ಲೇಖವಾಗಿಲ್ಲ. ಆದರೆ, ಲಿಪಿಯ ಶೈಲಿ ಹಾಗೂ ದುರ್ಮುಖಿ ಸಂವತ್ಸರದ ಮಾರ್ಗಶಿರಾ ಕಾರ್ತಿಕ ಎಂದು ಉಲೇಖವಾಗಿದೆ. ಆದ್ದರಿಂದ ಕ್ರಿ.ಶ.10ನೇ ಶತಮಾನದ್ದು ಎನ್ನಲಾಗಿದೆ. ದೇವಸ್ಥಾನದ ಅರ್ಚಕರ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನಾ ತಂಡದಿಂದ ಪತ್ತೆ ಮಾಡಲಾಗಿದೆ ಎಂದು ವಿಎಸ್‌ಕೆ ವಿವಿ ಪ್ರೊ.ತಿಪ್ಪೇಸ್ವಾಮಿ ತಿಳಿಸಿದ್ದಾರೆ.