ಜಿಲ್ಲೆ

ಮಂಗಳೂರು ರಿಷಿ ಯಕ್ಷರಾಗ ಸಂಭ್ರಮದಲ್ಲಿ ಕಲಾವಿದರಿಗೆ ಗೌರವ

ಮಂಗಳೂರು: ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ರಿಷಿ ಕಲಾಕೇಂದ್ರ ಮಂಗಳೂರು ಇದರ ವತಿಯಿಂದ ರಿಷಿ ಯಕ್ಷರಾಗ ಸಂಭ್ರಮ 2025 ನಗರದ ಕದ್ರಿ ವ್ಯಾಸ ನಗರದ ಪದ್ಮಕುಟೀರದಲ್ಲಿ ನೆರವೇರಿತು.

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಪತ್ರಕರ್ತ ಐಬಿ ಸಂದೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು .ಪತ್ರಕರ್ತ ಗಿರಿಧರ್ ಶೆಟ್ಟಿ, ರಿಷಿ ಪ್ರತಿಷ್ಠಾನದ ಶ್ರೀಧರ ಮಣಿಯಾಣಿ, ಸಾಮಾಜಿಕ ಕಾರ್ಯಕರ್ತ ಜಗದೀಶ್ ಪಡ್ಪು , ಜಯರಾಮ್ ಗುಣಾಜೆ, ಶಿವಾನಂದ ಕಣ್ವ ತೀರ್ಥ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಗುರು ಹಾಗೂ ಭಾಗವತರಾದ ದಯಾನಂದ ಕೋಡಿಕಲ್ ಮತ್ತು ಕಟೀಲು ಮೇಳದ ಭಾಗವತರಾದ ಪವನ್ ರೈ ಪಾಣಾಜೆ ಅವರನ್ನು ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಸಂಸ್ಥಾಪಕ ದಿವಾಕರ್ ಪದ್ಮುಂಜ, ಪ್ರತಿಷ್ಠಾನದ ಅಧ್ಯಕ್ಷ ಅವಿನಾಶ್ ಕುಲಾಲ್, ಯಕ್ಷಗಾನ ಗುರು ವಿಶ್ವನಾಥ ಪದ್ಮುಂಜ,ರಿಷಿ ಕಲಾಕೇಂದ್ರದ ಅಧ್ಯಕ್ಷೆ ವಸುಧಾ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಉದಯೋನ್ಮುಖ ಯುವ ಭಾಗವತರಾದ ಕಟೀಲು ಮೇಳದ ಪವನ್ ರೈ ಪಾಣಾಜೆ, ಪ್ರಸಾದ್ ಆಚಾರ್ಯ ತಾರೆಮಾರ್ ದಿಲೀಪ್ ಆಚಾರ್ಯ ಬಜ್ಪೆ, ಪಾವನ ಭಟ್ ನೀರ್ಪಾಜೆ, ಧೀರಜ್ ಆಚಾರ್ಯ ಕೂಳೂರು ಇವರಿಂದ ರಿಷಿ ಯಕ್ಷರಾಗ ಸಂಭ್ರಮ ಕಾರ್ಯಕ್ರಮ ನಡೆಯಿತು. ಹಿಮ್ಮೇಳದಲ್ಲಿ ದಯಾನಂದ ಕೋಡಿಕಲ್ ಹಾಗೂ ಶೈವಿನ್ ಶೆಟ್ಟಿಗಾರ್ ಸಹಕರಿಸಿದರು. ಕಾರ್ಯಕ್ರಮ ನೀಡಿದ ಕಲಾವಿದರನ್ನು ಗೌರವಿಸಲಾಯಿತು. ಪ್ರತಿಷ್ಠಾನದ ಸಂಚಾಲಕಿ ದೇವಿಕಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.