ವೃತ್ತಿ ಮಾರ್ಗದರ್ಶನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಕೌಶಲಾಭಿವೃಧ್ಧಿ ಅಧಿಕಾರಿ ಹೇಮಚಂದ್ರ.ಎಸ್.ಜೆ., ಮಂಗಳೂರು ವಿ.ವಿ.ಯ ಎನ್‌ಎಸ್‌ಎಸ್ ಸಂಯೋಜಕಿ ಡಾ.ನಾಗರತ್ನ ಕೆ.ವಿ., ಯುಎನ್‌ಡಿಪಿ ರಾಜ್ಯ ಮುಖ್ಯಸ್ಥ ಗೋವಿಂದರಾಜ್ ಜಯಚಂದ್ರನ್ ಮುಂತಾದವರು ಉಪಸ್ಥಿತರಿದ್ದರು. 
ಜಿಲ್ಲೆ

ಕೌಶಲ ಅಭಿವೃದ್ಧಿ ಯೋಜನೆಗಳು ಅಗತ್ಯ, ಜಿಲ್ಲಾ ಕೌಶಲಾಭಿವೃಧ್ಧಿ ಅಧಿಕಾರಿ ಹೇಮಚಂದ್ರ ಹೇಳಿಕೆ

Shravan Kumar Nala

ಮಂಗಳೂರು: ಪ್ರಸ್ತುತ ಬದಲಾಗುತ್ತಿರುವ ಔದ್ಯೋಗಿಕ ಪರಿಸರದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉನ್ನತ ಉದ್ಯೋಗ ಪಡೆಯಲು ಬೇಕಾಗುವ ಕೌಶಲಗಳನ್ನು ಅಭಿವೃಧ್ದಿ ಪಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸಬಲೀಕರಣ ಮಾಡುವ ಯೋಜನೆಗನ್ನು ರೂಪಿಸಬೇಕೆಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಹೇಮಚಂದ್ರ ಎಸ್.ಜೆ. ಹೇಳಿದರು.

ಜಿಲ್ಲಾ ಕೌಶಲಾಭಿವೃಧ್ಧಿ ಇಲಾಖೆ ಮತ್ತು ಹೆಡ್ ಹೆಲ್ಡ್ ಹೈ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳ ಎನ್‌ಎಸ್‌ಎಸ್ ಮತ್ತು ಪ್ಲೇಸ್‌ಮೆಂಟ್ ಅಧಿಕಾರಿಗಳಿಗೆ ನಗರದ ಶ್ರೀನಿವಾಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ ಎರಡು ದಿನಗಳ ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ವಿ.ವಿ.ಯ ಎನ್‌ಎಸ್‌ಎಸ್ ಸಂಯೋಜಕಿ ಡಾ.ನಾಗರತ್ನ ಕೆ.ವಿ., ಯುಎನ್‌ಡಿಪಿ ರಾಜ್ಯ ಮುಖ್ಯಸ್ಥ ಗೋವಿಂದರಾಜ್ ಜಯಚಂದ್ರನ್ ಮುಖ್ಯ ಅತಿಥಿಗಳಾಗಿದ್ದರು.

ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿ ರಮ್ಯ ವೃತ್ತಿ ಮಾರ್ಗದರ್ಶನ ನೀಡಿದರು. ಜಿಲ್ಲಾ ಸಂಯೋಜಕ ಶಿವಕುಮಾರ ಕೆ.ಎಂ.ಉಪಸ್ಥಿತರಿದ್ದರು. ಹೆಡ್ ಹೆಲ್ಡ್ ಹೈ ಸಂಸ್ಥೆಯ ರಾಘವೇಂದ್ರ ಸ್ವಾಗತಿಸಿದರು.