ಜಿಲ್ಲೆ

ಸಿಂಚನಾ ಪಿ.ರಾವ್‌ಗೆ ನೃತ್ಯ ಮಾಣಿಕ್ಯ ಪ್ರಶಸ್ತಿ : ಮಂಗಳೂರಿನ ನೃತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರದಾನ

ಸೌಮ್ಯ ಆರ್

ಬೆಳ್ತಂಗಡಿ: ಮಂಗಳೂರಿನ ತರುಣ್ ಡ್ಯಾನ್ಸಿಂಗ್ ಯುನಿಟ್‌ನ ಡ್ಯಾನ್ಸ್ ಮತ್ತು ಫಿಟ್‌ನೆಸ್ ಸೆಂಟರ್ ಹಾಗೂ ಆಂಗಿಕಂ ಸ್ಕೂಲ್ ಆಫ್ ಆಕ್ಟಿಂಗ್ ಮತ್ತು ಫಿಲ್ಮ್ ಸ್ಟುಡಿಯೋ ಸಹಯೋಗದೊಂದಿಗೆ ಮಂಗಳೂರಿನಲ್ಲಿ ನಡೆದ ನೃತ್ಯ ಸಂಭ್ರಮ-2024 ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಜಿರೆಯ ಬಾಲಪ್ರತಿಭೆ ಸಿಂಚನಾ ಪಿ.ರಾವ್ ಅವರಿಗೆ ಸಂಯೋಜಕ ತರುಣ್ ರಾಜ್ ನೃತ್ಯ ಮಾಣಿಕ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಉಜಿರೆಯ ಅನಂತಪದ್ಮನಾಭ ರಾವ್ ಮತ್ತು ವಾಣಿ ದಂಪತಿ ಪುತ್ರಿಯಾದ ಸಿಂಚನಾ ಪಿ. ರಾವ್ ಪಾಶ್ಚಿಮಾತ್ಯ ನೃತ್ಯ, ಯಕ್ಷಗಾನ, ಭರತನಾಟ್ಯ ಅಭ್ಯಸಿಸಿ, ಭೂಮಿ ಕ್ರಿಯೇಷನ್ಸ್ ಕರ್ನಾಟಕ ಆಯೋಜಿಸಿದ್ದ ಪ್ರತಿಭಾ ತರಂಗ ಸಾಂಸ್ಕೃತಿಕ ಉತ್ಸವದಲ್ಲಿ ಕಲಾನಿಧಿರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ನವದೆಹಲಿಯಲ್ಲಿ ನಡೆದ 6ನೇ ಅಖಿಲ ಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ತುಮಕೂರಿನ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂದಾರ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಮೊದಲ ಚಲನಚಿತ್ರ ದೃಷ್ಟಿ, ಕನ್ನಡ ಚಲನಚಿತ್ರ ಅಭೇದ್ಯಮ್, ತಮಿಳು ಚಿತ್ರ ದೃಷ್ಟಿ, ಇಂಗ್ಲಿಷ್ ಮೂವಿ ಲಾಸ್ಟ್ ವೇವ್ ಹಾಗೂ ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿ ಶಾಂತಂ ಪಾಪಂನಲ್ಲಿ ಅಭಿನಯಿಸಿದ್ದಾರೆ.