ಜಿಲ್ಲೆ

ಯೋರೋಪ್‌ನ ಜಾರ್ಜಿಯಾ ದೇಶದ ಪ್ರವಾಸ ಪ್ಯಾಕೇಜ್ ನಂಬಿ 1.51 ಲಕ್ಷ ರೂ. ಮೋಸ

ಮಂಗಳೂರು: ಯೋರೋಪ್‌ನ ಜಾರ್ಜಿಯಾ ದೇಶದ ಪ್ರವಾಸ ಪ್ಯಾಕೇಜ್ ಕುರಿತ ಮಾಹಿತಿಯನ್ನ ನಂಬಿ ಒಟ್ಟು 1.51 ಲಕ್ಷ ರೂ. ಕಳೆದುಕೊಂಡಿರುವ ಕುರಿತಂತೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾರೆ ಜೆಸಿಂತಾ ಡಿಸೋಜ ಅವರಿಗೆ ಕಳೆದ ಡಿಸೆಂಬರ್‌ನಲ್ಲಿ ೆನ್ ಕರೆಯೊಂದು ಬಂದಿದ್ದು, ಅದರಲ್ಲಿ ನಿಮಗೆ ಗ್‌ಟಿ ವೋಚರ್ ಬಂದಿದ್ದು, ಮಂಗಳೂರಿನ ಹಂಪನಕಟ್ಟೆಯ ಹೊಟೇಲ್‌ಗೆ ಬಂದು ಕಲೆಕ್ಟ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ದೂರುದಾರರು ಮತ್ತು ಅವರ ಗಂಡ ಡಿ.14ರಂದು ಸಂಜೆ 5 ಗಂಟೆಗೆ ಹೊಟೇಲ್‌ಗೆ ಹೋಗಿದ್ದು, ಅಲ್ಲಿ ಹರ್ಬಾಝ್ ಮತ್ತು ಪ್ರಿಯಾಂಕಾ ಎನ್ನುವ ಹೆಸರಿನ ಇಬ್ಬರು ಡ್ರೀಮಿ ಹೆವೆನ್ಸ್ ಕ್ಲಬ್ ಪ್ರೈ.ಲಿ. ಸಿಬಂದಿ ಎಂದು ಪರಿಚಯಿಸಿಕೊಂಡಿದ್ದಾರೆ. ರಜಾ ಸಮಯದಲ್ಲಿ ದೇಶ ವಿದೇಶದಲ್ಲಿ ಪ್ರವಾಸ ಪ್ಯಾಕೇಜ್ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದ್ದರೆ. ಈ ವೇಳೆ ಜೆಸಿಂತಾ ಅವರು ಜಾರ್ಜಿಯಾ ಪ್ರವಾಸ ಪ್ಯಾಕೇಜ್ ಇದೆಯೇ ಎಂದು ಕೇಳಿದಾಗ ಅದಕ್ಕೂ ವ್ಯವಸ್ಥೆ ಇದೆ ಎಂದು ನಂಬಿಸಿದ್ದಾರೆ.

ಅವರ ಮಾತನ್ನು ಬಂಬಿದ ಅವರು ನೀಡಿದ ಸಂಸ್ಥೆಯ ಬ್ಯಾಂಕ್ ಖಾತೆಯ ಸ್ಕ್ಯಾನರ್‌ಗೆ ಒಟ್ಟು 1,51,800 ರೂ. ವನ್ನು ವಿವಿಧ ಮೂಲಗಳ ಮೂಲಕ ಜಮಾ ಮಾಡಿದ್ದಾರೆ. ಮೂರು ವಾರಗಳ ಬಳಿಕ ಅವರು ನೀಡಿದ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಿಲ್ಲ. ಹಣವನ್ನು ವಾಪಾಸು ಕೇಳಲು ಆರಂಭಿಸಿದ ಬಳಿಕ ಕರೆಯನ್ನು ಸ್ವೀಕರಿಸುತ್ತಿಲ್ಲ .ವಿದೇಶಕ್ಕೆ ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.