ಜಿಲ್ಲೆ

ಮಾದಕ ವಸ್ತು ಮಾರಾಟ ಅಂತರ್ ರಾಜ್ಯ ಆರೋಪಿಗಳ ಬಂಧನ

ಹರೀಶ ಎಂ.

ಮಂಗಳೂರು: ಮಾದಕ ವಸ್ತು ಎಸ್‌ಎಸ್‌ಡಿ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್ ರಾಜ್ಯ ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿ, ಮಾದಕ ವಸ್ತು ಹಾಗೂ ಕಾರು ವಶಕ್ಕೆ ಪಡೆದಿದ್ದಾರೆ.


ಕೇರಳ ರಾಜ್ಯದ ಆದಿಲ್ ಹಾಗೂ ಮಹಮ್ಮದ್ ನಿಹಾಲ್ ಬಂಧಿತರು. ಮೂಲ್ಕಿ ಠಾಣಾ ಪಿಎಸ್‌ಐ ಅನಿತಾ ಪಿ.ಎಸ್. ಅವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಹಳೆಯಂಗಡಿ ಗ್ರಾಮದ ಕೊಪ್ಪಳ ಸೇತುವೆ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.


ಇವರು ನಗರದ ಹೊರ ವಲಯದ ಕಾಲೇಜೊಂದರ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳು. ಇವರಿಂದ 78 ಸಾವಿರ ರೂ. ಮೌಲ್ಯದ 26 ಎಲ್‌ಎಸ್‌ಡಿ ಸ್ಟಾರ್ ಸ್ಟ್ರಿಪ್ಸ್ ಮಾದಕ ವಸ್ತು, 2 ಐ ಫೋನ್ ಹಾಗೂ ಮಾರಾಟಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.