ಜಿಲ್ಲೆ

ಡಾ. ಚೂಂತಾರು ಅವರ 16 ನೇ ಕೃತಿ ಸುಭಿಕ್ಷಾ 30ರಂದು ಬಿಡುಗಡೆ

ಮಂಗಳೂರು: ಖ್ಯಾತ ಸಾಹಿತಿ, ದಂತ ವೈದ್ಯ ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕ್ಸಿತಕ ಡಾ. ಮುರಲೀ ಮೋಹನ್ ಚೂಂತಾರು ಅವರ 16 ನೇ ಕೃತಿ ಸುಭಿಕ್ಷಾ ದಂತ ಆರೋಗ್ಯ ಮಾರ್ಗದರ್ಶಿ ಡಿ. 30ರಂದು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಬೆಳಗ್ಗೆ 11 ಘಂಟೆಗೆ ಬಿಡುಗಡೆಗೊಳ್ಳಲಿದೆ.

ಕಸಾಪ ಮಂಗಳೂರು ತಾಲೂಕು ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಈ ಪುಸ್ತಕ ಬಿಡುಗಡೆ ನಡೆಯಲಿದ್ದು,ನವದೆಹಲಿಯ ಟೂರಿಸಂ ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಇವರು ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿ ಪ್ರೊ. ಎ.ವಿ. ನಾವಡ ಅವರು ಕೃತಿಯ ಬಗ್ಗೆ ಮಾತನಾಡಲಿದ್ದಾರೆ. ಕಾಸರಗೋಡು ಹಿರಿಯ ದಂತ ವೈದ್ಯ ಡಾ. ಗಣಪತಿ ಭಟ್ ಕುಳಮರ್ವ ಅವರ ಉಪಸ್ಥಿತಿಯಲ್ಲಿ ಕಸಾಪ ಮಂಗಳೂರು ಇದರ ಅಧ್ಯಕ್ಷ ಡಾ. ಮಂಜುನಾಥ ಎಸ್. ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಮತ್ತು ಲೇಖಕ ಡಾ. ಮುರಲೀ ಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.