ಮಂಗಳೂರು:ಪಕ್ಷದ ಮೂಲಬೇರಿನಂತಿರುವ ಕಾರ್ಯಕರ್ತರೇ ಪಕ್ಷದ ಶಕಿ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ಕಾರ್ಯಕರ್ತರ ಪಡೆಯನ್ನು ಹೊಂದಿದ್ದು ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಡುಚಿ ಕ್ಷೇತ್ರದ ಮಾಜಿ ಶಾಸಕ ಕೆ.ರಾಜೀವ್ ಹೇಳಿದರು.
ಭಾರತೀಯ ಜನತಾ ಪಾರ್ಟಿ 15 ನೇ ವಾರ್ಡ್ ಕಾವೂರು ಇದರ ಬೂತ್ ಸಂಖ್ಯೆ 86ರ ಗಾಂಧಿನಗರ ದೋಟದ ಜಯರಾಮ್ ಅವರ ಮನೆಯಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಭೃಷ್ಟಾಚಾರದಲ್ಲಿ ಮುಳುಗಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಭಿವೃದ್ಧಿ ಮಾಡದೆ ರಾಜ್ಯವನ್ನು ಹಿಂದಕ್ಕೆ ತಳ್ಳುತ್ತಿದೆ. ಜನ ಸಾಮಾನ್ಯರಿಗೆ ಸಿಗಬೇಕಾದ ಸೌಲಭ್ಯಗಳೂ ಸರಿಯಾಗಿ ಸಿಗುತ್ತಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸಲು ಕಾರ್ಯಕರ್ತರು ಈಗಿನಿಂದಲೇ ತಮ್ಮ ಚುನಾವಣಾ ಅಭಿಯಾನವನ್ನು ಮನೆ ಮನೆ ಮೂಲಕ ಆರಂಭಿಸಬೇಕೆಂದರು.
ಚುನಾವಣೆ ಹೇಗೆ ಎದುರಿಸಬೇಕು ಪಕ್ಷ ಸಂಘಟನೆ ಯಾವ ರೀತಿ ಮಾಡಬೇಕು,ಪಕ್ಷದಲ್ಲಿ ಜವಾಬ್ದಾರಿ ಇರುವವರ ಕೆಲಸ ಹೇಗೆ ಮಾಡಬೇಕು ಎಂಬುದರ ಬಗ್ಗೆ ಸ್ವವಿವರವಾಗಿ ಕಾರ್ಯಕರ್ತರಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ರಂದೀಪ್ ಕಾಂಚನ್, ಮಹೇಶ್ ಜೋಗಿ, ಮನಪ ಸದಸ್ಯೆ ಸುಮಂಗಲ ರಾವ್, ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಸೀತೆಶ್ ಕೊಂಡೆ, ಕಾರ್ಯದರ್ಶಿ ಉಮೇಶ್ ಕುಳೂರು,ಉತ್ತರ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ಸಾಕ್ಷಾತ್ ಶೆಟ್ಟಿ ,ಕಾವೂರು ವಾರ್ಡ್ ಅಧ್ಯಕ್ಷರಾದ ಅಜಿತ್ ಶೆಟ್ಟಿ ಕಾವೂರು,ಬೂತ್ ಅಧ್ಯಕ್ಷರಾದ ವಿನೋದ್ ಹಾಗೂ ಜಿತೇಶ್, ಬೂತ್ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.