ಜಿಲ್ಲೆ

ವೆಲೆನ್ಸಿಯಾದ ಹೈಪರ್ ಮಾರ್ಕೆಟ್‌ನಿಂದ ಕಳವು


ಮಂಗಳೂರು : ನಗರದ ವೆಲೆನ್ಸಿಯಾದ ಹೈಪರ್ ಮಾರ್ಕೆಟ್‌ವೊಂದಕ್ಕೆ ನುಗ್ಗಿರುವ ಕಳ್ಳರು 1.15 ಲ.ರೂ. ಕಳವು ಮಾಡಿದ್ದಾರೆ.

ಆಲ್ವಿನ್ ಡಿಸೋಜ ಅವರು ತನ್ನ ಮಾಲಿಕತ್ವದ ಮಾರ್ಟಿನ್ ಹೈಪರ್ ಮಾರ್ಕೆಟ್ ಶಾಪ್‌ನಲ್ಲಿ ಜು.29ರಂದು ರಾತ್ರಿ 10.30ಕ್ಕೆ ವ್ಯವಹಾರ ಮುಗಿಸಿ ಲಾಕ್ ಮಾಡಿ ಹೋಗಿದ್ದರು. ಮರುದಿನ ಬೆಳಗ್ಗೆ 6.30ಕ್ಕೆ ಬಂದು ನೋಡಿದಾಗ ಯಾರೋ ಕಳ್ಳರು ಬಾಗಿಲನ್ನು ಒಡೆದು ಒಳಪ್ರವೇಶಿಸಿ ಡ್ರಾವರ್‌ನಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.