ಜಿಲ್ಲೆ

ಕೈಗಾರಿಕೋದ್ಯಮಿ ದಿ.ವಿ.ಎಸ್.ಕುಡ್ವರ ಜನ್ಮದಿನಾಚರಣೆ

ಹರೀಶ ಎಂ.

ಮಂಗಳೂರು: ನಗರದ ಪತ್ರಿಕೋದ್ಯಮಿ, ಕೈಗಾರಿಕೋದ್ಯಮಿಯಾಗಿದ್ದ ಕೆನರಾ ವರ್ಕ್‌ಶಾಪ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ದಿ.ವಿ.ಎಸ್. ಕುಡ್ವರ 125ನೇ ಜನ್ಮ ದಿನಾಚರಣೆ ಭಾನುವಾರ ಕೆನರಾ ವರ್ಕ್‌ಶಾಪ್ ಸಂಸ್ಥೆಯ ಕೈಗಾರಿಕಾ ಸಂಕೀರ್ಣದಲ್ಲಿ ನಡೆಯಿತು.


ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರೇಮನಾಥ ಕುಡ್ವ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕರ ಆಡಳಿತ ಕ್ಷಮತೆ, ಕಾರ್ಯ ದಕ್ಷತೆ, ಕರ್ತವ್ಯ ನಿರ್ವಹಣೆ ಮತ್ತು ಸಮಯ ಪಾಲನೆ ಮತ್ತು ಪತ್ರಿಕೋದ್ಯಮ, ಕೈಗಾರಿಕೋದ್ಯಮಗಳ ಸಾಧನೆ ಮಾದರಿ ಎಂದರು.


ದಿ.ಕುಡ್ವರ ಪುತ್ಥಳಿಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಸಂಸ್ಥೆಯ ನಿವೃತ್ತ ಉಪಮಹಾಪ್ರಬಂಧಕರಾದ ಅಬ್ದುಲ್ ಸಲೀಂ ಅವರು ಮುಖ್ಯ ಅತಿಥಿಯಾಗಿದ್ದರು. ಸಂಸ್ಥಾಪಕ ಕೈಗಾರಿಕೋದ್ಯಮದಲ್ಲಿ

ಯೋಜನೆ, ಧ್ಯೇಯ ಮತ್ತು ದೂರದರ್ಶಿತ್ವದ ವಿವರ ನೀಡಿ ಉದ್ಯಮದಲ್ಲಿ ಯಶಸ್ಸು ಸಾಧಿಸಿದ್ದನ್ನು ಸ್ಮರಿಸಿದರು.
ವಿ.ಎಸ್.ಕುಡ್ವರ ಜೀವನ ಚರಿತ್ರ ಕೃತಿಯ ಲೇಖಕ ವಸಂತ ಮಲ್ಯ ಗೌರವ ಅತಿಥಿಯಾಗಿದ್ದರು. ಸಿಬಂದಿ, ಕಾರ್ಮಿಕರ ಸಂಘದ ಪದಾಧಿಕಾರಿಗಳು ಗೌರವ ಸಲ್ಲಿಸಿದರು.


ಸಂಸ್ಥೆಯ ಮಹಾಪ್ರಬಂಧಕರಾದ ರವಿಚಂದ್ರ ರಾವ್ ನಿರೂಪಿಸಿದರು. ಮಹಿಳಾ ಅಧಿಕಾರಿ ಕಿರಣ ಸ್ವಾಗತಿಸಿದರು.