ಮಂಗಳೂರು: ನಗರದ ಲೇಡಿಹಿಲ್ ಉರ್ವ ಚರ್ಚಿನ ದೇವಾಲಯದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ ಡಿ.8ರಂದು ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ನವದಿನಗಳ ನೊವೆನಾಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು ಎಪಿಸ್ಕೋಪಲ್ ಸಿಟಿ ಡೀನರಿಯ ಮುಖ್ಯಗುರು ಹಾಗೂ ಮಿಲಾಗ್ರಿಸ್ ಚರ್ಚಿನ ಪ್ರಧಾನ ಧರ್ಮಗುರು ಾ.ಬೊನವೆಂಚರ್ ನಜರೇತ್ ಅವರು ನವದಿನಗಳ ನೊವೆನಾಕ್ಕೆ ಚಾಲನೆ ನೀಡಿದರು. ನೊವೆನಾಕ್ಕೂ ಮೊದಲು ಪುಣ್ಯ ಕ್ಷೇತ್ರದಲ್ಲಿ ಹಬ್ಬದ ಅಂಗವಾಗಿ ಧ್ವಜರೋಹಣ ನಡೆಸಲಾಯಿತು.
ಈ ಸಂದರ್ಭ ಉರ್ವ ಲೇಡಿಹಿಲ್ ಚರ್ಚಿನ ಪ್ರಧಾನ ಧರ್ಮಗುರು ಾ. ಬೆಂಜಮಿನ್ ಪಿಂಟೋ, ಸಹಾಯಕ ಧರ್ಮಗುರು ಾ. ಲ್ಯಾನ್ಸನ್ ಪಿಂಟೋ, ವಿಶ್ರಾಂತ ಧರ್ಮಗುರು ಾ. ಹೆನ್ರಿ ಸಿಕ್ವೇರಾ, ಚರ್ಚಿನ ಪಾಲನಾ ಸಮಿತಿ ಉಪಾಧ್ಯಕ್ಷ ಲೋಯ್ಡ ಲೋಬೋ, ಕಾರ‌್ಯದರ್ಶಿ ಸಿಲ್ವಿಯಾ ಮಸ್ಕರೇನಸ್, 21 ಆಯೋಗದ ಸಂಯೋಜಕ ಕೆವಿನ್ ಮಾರ್ಟಿಸ್ ಸೇರಿದಂತೆ ನೂರಾರು ಭಕ್ತಾದಿಗಳು ಹಾಜರಿದ್ದರು. ಡಿ.7ರ ವರೆಗೆ ವಿವಿಧ ವಿಷಯಗಳಲ್ಲಿ ಒಂಬತ್ತು ಧರ್ಮಗುರುಗಳ ನೇತೃತ್ವದಲ್ಲಿ ನವ ದಿನಗಳ ನೊವೆನಾಗಳು ಸಾಗಲಿದೆ.