ಜಿಲ್ಲೆ

ಮಂಗಳೂರು ವಿವಿ ಗ್ರಂಥಾಲಯ ವಿಜ್ಞಾನ ರಾಜ್ಯ ಮಟ್ಟದ ಕಾರ್ಯಗಾರ

ಹರೀಶ ಎಂ.

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಕೋಹಾ ಲೈಬ್ರೆರಿ ಆಟೋಮೇಶನ್ ಸಾಫ್ಟ್‌ವೇರ್ ಪ್ರಾಯೋಗಿಕ ರಾಜ್ಯ ಮಟ್ಟದ ಕಾರ್ಯಾಗಾರ ಮತ್ತು ಪುಸ್ತಕ ಬಿಯೋನ್ದ ಬೈನರಿ:ಮೆಟಾಮೈಂಡ್ ಲೈಬ್ರೆರಿಸ್ ಆಂಡ್ ಡಿಜಿಟಲ್ ರಿವೊಲ್ಯೂಶನ್ ಬಿಡುಗಡೆ ಅ.28 ಮತ್ತು 29ರಂದು ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ. ಉಮೇಶ್ ನಾಯ್ಕ, ಮತ್ತು ತಿರುಪತಿ ನ್ಯಾಷನಲ್ ಸಂಸ್ಕೃತ ವಿವಿ ಉಪ ಗ್ರಂಥಪಾಲಕ ಡಾ. ವಸಂತ ಎನ್. ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಪ್ರಾಧ್ಯಾಪಕಿ ಡಾ. ರೇಖಾ ಡಿ. ಪೈ ಇವರು ಒಪನ್ ಸೋರ್ಸ್ ಸಾಫ್ಟ್‌ವೇರ್ ಕೋಹಾ ಇದರ ಉನ್ನತ ಮಟ್ಟದ ತಂತ್ರಾಂಶಗಳ ಬಗ್ಗೆ ಮಾಹಿತಿ ನೀಡಿದರು. ಬೆಸೆಂಟ್ ಸಂಧ್ಯಾ ಕಾಲೇಜು ಪ್ರಾಧ್ಯಾಪಕ ಡಾ. ವಾಸಪ್ಪ ಗೌಡ ಗೌರವ ಅತಿಥಿಯಾಗಿದ್ದರು.

ಈ ಸಂದರ್ಭದಲ್ಲಿ ಕೆ.ಸೆಟ್, ನೆಟ್ ಪರೀಕ್ಷೆ ಉತ್ತೀರ್ಣರಾದವರನ್ನು ಗೌರವಿಸಲಾಯಿತು. ಡಾ. ವಾಸಪ್ಪ ಗೌಡ ಮತ್ತು ಪ್ರೊ. ಉಮೇಶ್ ನಾಯ್ಕ ಇವರನ್ನು ಪ್ರೊಫೆಸರ್ ಗ್ರೇಡ್ ಪದೋನ್ನತಿಗಾಗಿ ಸನ್ಮಾನಿಸಲಾಯಿತು.

ರೇಣುಕಾ, ಸುಶೀಲಾ ಕೆ., ಮೇಘಾನಂದ ಸಿ, ಶಿವರಾಜ್, ಸುನೀತಾ ಮಚಾದೊ, ವಿನಾಯಕ ಸವಟಗಿ ಮತ್ತು ಯಶೋದ ಇವರು ನಿರ್ವಹಿಸಿದರು.

ಕವಿತ ಗಣೇಶ್ ಸ್ವಾಗತಿಸಿದರು. ಶಿರ್ವ ಕಾಲೇಜಿನ ಗ್ರಂಥಪಾಲಕಿ ತನುಜಾ, ವಂದಿಸಿದರು. ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.