ಜಿಲ್ಲೆ

ಮಾದಕ ವಸ್ತು ಸೇವನೆ ಇಬ್ಬರ ಬಂಧನ

ಮಂಗಳೂರು: ಲಾಲ್‌ಭಾಗ್‌ನಲ್ಲಿ ಮಾದಕ ವಸ್ತು ಸೇವನೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಉಡುಪಿ ಜಿಲ್ಲೆ ಪಡುಬಿದ್ರೆ ನಡ್ಸಾಲ್ ಬೆಂಗ್ರೆ ರೋಡ್ ನಿವಾಸಿ ಮೊಹಮ್ಮದ್ ರಾಹಿಲ್ (31) ಮತ್ತು ಪಾದೆಬೆಟ್ಟು ನಿವಾಸಿ ಕಲಂದರ್ (31) ಬಂಧಿತರು. ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಘಟಕದ ಉಪ ನಿರೀಕ್ಷಕ ರಾಜೇಂದ್ರ ಬಿ.ಅವರು ಸಿಬಂದಿಯೊಂದಿಗೆ ಬಂದಾಗ ಇಬ್ಬರು ಯುವಕರು ಅಮಲು ವಸ್ತು ಸೇವಿನೆ ಮಾಡಿದವರಂತೆ ಕಂಡು ಬಂದಿದ್ದಾರೆ. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಆರೋಪಿಗಳ ವಿರುದ್ಧ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.