ಜಿಲ್ಲೆ

ಮಂಗಳೂರು ಪ್ರತ್ಯೇಕ ಪ್ರಕರಣ ಎರಡು ಕಡೆ ದ್ವಿಚಕ್ರ ಕಳವು

ಹರೀಶ ಎಂ.


ಮಂಗಳೂರು: ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕಡೆ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ.


ಮರ್ವಿನ್ ಸುನಿಲ್ ಪಿಂಟೋ ಅವರು ಅ.30ರಂದು ಮಧ್ಯಾಹ್ನ 2.15ಕ್ಕೆ ವಾಮಂಜೂರು ಚರ್ಚ್ ಎದುರಿನ ಅಂಗಡಿಯ ಹೊರಗೆ ದ್ವಿಚಕ್ರ ವಾಹನ ನಿಲ್ಲಿಸಿ ಅಂಗಡಿ ಒಳಗೆ ಹೋಗಿ 10 ನಿಮಿಷ ಬಿಟ್ಟು ವಾಪಸ್ ನೋಡಿದಾಗ ಕಪ್ಪು ಬಣ್ಣದ ವಾಹನ ಕಳವಾಗಿತ್ತು.


ಮತ್ತೊಂದು ಪ್ರಕರಣದಲ್ಲಿ ಕಾರ್ತಿಕ್ ಸತೀಶ್ ಪೂಜಾರಿ ಅವರು ಪಡೀಲ್ ಬಳಿ ಇರುವ ಶೋರೂಮ್ ಕಂಪೌಂಡ್ ಹೊರಗೆ ಅ.27ರಂದು ಬೆಳಗ್ಗೆ 8.30ಕ್ಕೆ ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಸಂಜೆ 6.30ಕ್ಕೆ ನೋಡುವಾಗ ಕಳವಾಗಿತ್ತು.