ಜಿಲ್ಲೆ

ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ತಂಡ ಪ್ರಥಮ ಅಖಿಲ ಭಾರತ ಮೈಕ್ರೋ ವಿಮಾನ ವಿಭಾಗದಲ್ಲಿ ಪ್ರಶಸ್ತಿ ಪಡೆದು ಸಾಧನೆ

ಹರೀಶ ಎಂ.

ಮಂಗಳೂರು: ತಮಿಳುನಾಡಿನ ಕರ್ಪಗ ವಿನಾಯಕ ಕಾಲೇಜ್ ಆ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ನಡೆದ ಎಸ್‌ಎಇಐಎಸ್‌ಎಸ್ ಡ್ರೋನ್ ಡೆವಲಪ್‌ಮೆಂಟ್ ಚಾಲೆಂಜ್- 2025 ಸ್ಪರ್ಧೆಯ ಮೈಕ್ರೋ ಏರ್‌ಕ್ರ್‌ಟಾ ವಿಭಾಗದಲ್ಲಿ ವಾಮಂಜೂರಿನ ಸೈಂಟ್ ಜೋಸ್ೆ ಇಂಜಿನಿಯರಿಂಗ್ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದಿದೆ.

ಸಂತ ಜೋಸ್ೆ ಎಂಜಿನಿಯರಿಂಗ್ ಕಾಲೇಜಿನ ಏರೋ ಮಾಡೆಲಿಂಗ್ ಕ್ಲಬ್-ಎಸ್‌ಜೆಇಸಿ ಏರೋ ಮಾನವರಹಿತ ವೈಮಾನಿಕ ವಾಹನಗಳಿಗೆ (ಆರ್‌ಸಿ ವಿಮಾನಗಳು ಮತ್ತು ಡ್ರೋನ್‌ಗಳು) ಸಂಬಂಸಿದಂತೆ ವಾಯುಯಾನ ಕ್ಷೇತ್ರದಲ್ಲಿ ನಾವೀನ್ಯತೆ ಸೃಷ್ಟಿಸುವ ಗುರಿಯೊಂದಿಗೆ ಸ್ಥಾಪಿಸಲಾಗಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್ ಡಾ.ರಿಯೋ ಡಿಸೋಜ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೇಶಾದ್ಯಂತ ವಿವಿಧ ವಿಭಾಗದಲ್ಲಿ 80ಕ್ಕೂ ಅಧಿಕ ತಂಡಗಳೊಂದಿಗೆ ಸ್ಪರ್ಧಿಸಿ, ಅಸಾಧಾರಣ ಏರೋನಾಟಿಕಲ್ ಎಂಜಿನಿಯರಿಂಗ್ ಕೌಶಲ್ಯಗಳನ್ನು ಪ್ರದರ್ಶಿಸಿ, ಪ್ರಥಮ ಸ್ಥಾನಗಳಿಸಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದೆ. ತಂಡವು ತಾಂತ್ರಿಕ ಪ್ರಸ್ತುತಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದೆ. ಕಾಲೇಜು ಹಿಂದಿನ ವರ್ಷಗಳಲ್ಲೂ ಸಾಧನೆ ಮಾಡಿದೆ ಎಂದು ಅವರು ವಿವರಿಸಿದರು.

ತಂಡದ ನಾಯಕ-ಅಕ್ಷಯ್ ಬಂಗೇರ, ಪೈಲಟ್- ಮನ್ವಿಶ್ ಎಂ.ಕೆ., ಸೈದ್ಧಾಂತಿಕ ತಂಡ- ಜೀವಿತ್ ಜಿ., ಆದಿತ್ಯ ಆರ್., ಗುರುಮಾಧವ ಎಚ್., ರಾಹುಲ್ ಟಿ.ಪಿ., ವಿನ್ಯಾಸ ತಂಡ- ಜೀವಿತ್ ಜಿ., ಮನ್ವಿಶ್ ಎಂ.ಕೆ., ಅಕ್ಷಯ್ ಬಂಗೇರ, ಲೇಖ್ನಾ ಶೆಟ್ಟಿ, ಕಂಪ್ಯೂಟೇಶನಲ್ ತಂಡ- ರಿಜಿಶ್ ಎ.ಜಿ., ರೇಣಿಕಾ ಯತೀಶ್, ಸ್ಟ್ಯಾಂಜಿಲ್ ್ಲೆಮಿನ್ ಮೆನೆಜೆಸ್, ಅಕ್ಷಯ್ ಬಂಗೇರ ತಂಡದಲ್ಲಿದ್ದರು ಎಂದರು.

ಕಾಲೇಜಿನ ನಿರ್ದೇಶಕ ಾದರ್ ವಿಲ್ಪ್ರೆಡ್ ಪ್ರಕಾಶ್ ಡಿಸೋಜ, ಉಪಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್, ಟೀಮ್ ಕ್ಯಾಪ್ಟನ್ ಅಕ್ಷಯ್ ಬಂಗೇರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.