ಜಿಲ್ಲೆ

ಮಂಗಳೂರು ಪರಿಸರದಲ್ಲಿ ಹಣ್ಣಿನ ಸಸಿಗಳ ವಿತರಣೆ


ಮಂಗಳೂರು: ಸೈಂಟ್ ಅಲೋಶಿಯಸ್ ಸಂಸ್ಥೆಗಳು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಣ್ಣಿನ ಮರ ನೆಡುವ ಅಭಿಯಾನ ಪ್ರಾರಂಭಿಸಿವೆ.


ಈ ಯೋಜನೆಯಡಿ ಮೂರು ವರ್ಷಗಳಲ್ಲಿ ಫಲ ನೀಡುವ ಉಚಿತ ನಾಟಿ ಹಣ್ಣಿನ ಸಸಿಗಳನ್ನು ಮಂಗಳೂರಿನ ಪರಿಸರ ಪ್ರೇಮಿಗಳಿಗೆ ವಿತರಿಸಲಾಗುತ್ತಿದೆ. ಮಂಗಳೂರನ್ನು ಹಣ್ಣಿನ ನಗರವನ್ನಾಗಿ ಪರಿವರ್ತಿಸುವುದು ಅವರ ಗುರಿಯಾಗಿದ್ದು, ಈ ವರ್ಷ ಹಲಸು, ಮಾವು, ವಾಟರ್ ಆಪಲ್, ಸ್ಟಾರ್ ಫ್ರೂಟ್, ಬ್ಲೂ ಬೆರ್ರಿ, ಕ್ಯಾಟ್ ಫ್ರೂಟ್ ಮುಂತಾದ ಸ್ಥಳೀಯ ತಳಿಯ 2000 ಹಣ್ಣಿನ ಸಸಿಗಳನ್ನು ಮಂಗಳೂರು ನಗರದ ಸುತ್ತಮುತ್ತ ನೆಡಲು ಉದ್ದೇಶಿಸಲಾಗಿದೆ.


ಪರಿಸರ ಪ್ರೇಮಿಗಳ ಕೋರಿಕೆಯ ಮೇರೆಗೆ ಸೈಂಟ್ ಅಲೋಶಿಯಸ್ ಸಂಸ್ಥೆಗಳ ರೆಕ್ಟರ್ ಫಾ.ಮೆಲ್ವಿನ್ ಪಿಂಟೋ ಎಸ್.ಜೆ ಮತ್ತು ಸಂಯೋಜಕ ಅರ್ಜುನ್ ಮಸ್ಕರೇನ್ಹಸ್ ಅವರು ಪಿ. ರವೀಂದ್ರ ಮತ್ತು ಶೋಭಾ ರಾವ್ ಬರೆಬೈಲ್ ಅವರ ಮನೆಗೆ ಭೇಟಿ ನೀಡಿ ಸಸಿಗಳನ್ನು ವಿತರಿಸಿದರು. ಬಳಿಕ ಅವುಗಳನ್ನು ನಡೆಲಾಯಿತು.