ಮಂಗಳೂರು: ನಗರದ ಸೂಟರ್‌ಪೇಟೆಯ ಮನೆಯಿಂದ ಚಿನ್ನಾಭರಣ ಕಳವು ಮಾಡಲಾಗಿದೆ.
ಆ.23ರ ಬೆಳಗ್ಗೆ 9ರಿಂದ 11.45ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲನ್ನು ತೆರೆದು ಲಾಕರ್‌ನಲ್ಲಿದ್ದ 25 ಗ್ರಾಂ ಚಿನ್ನಾಭರಣ, 47,000 ರೂ. ನಗದು ಸೇರಿದಂತೆ ಒಟ್ಟು ಅಂದಾಜು 1.47 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.